ಬಂಟ್ವಾಳ : ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ. ರಮಾನಾಥ ರೈಯವರ ನಾಯಕತ್ವವನ್ನು ಮೆಚ್ಚಿ ಸಾಮಾಜಿಕ ಚಿಂತಕರುಗಳಾದ ಗುಬ್ಯಮೇಗಿನ ಗುತ್ತಿನ ಶ್ರೀಧರ ಕೆ. ಶೆಟ್ಟಿ ಮತ್ತು ಪಟ್ಲಗುತ್ತಿನ ದಾಮೋದರ ಶೆಟ್ಟಿ ಕಾಂಗ್ರೆಸ್ ಸೇರ್ಪಡೆಯಾದರು.ಬುಧವಾರ ಬಿ.ಸಿ.ರೋಡ್ ನಲ್ಲಿರುವ ಪಕ್ಷದ ಚುನಾವಣಾ ಕಚೇರಿಯಲ್ಲಿ ಶ್ರೀಧರ ಶೆಟ್ಟಿ ಮತ್ತು ದಾಮೋದರ ಶೆಟ್ಟಿ ಅವರನ್ನು ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ,ಮಾಜಿ ಸಚಿವ ರಮಾನಾಥ ರೈಯವರು ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು.

ಬಂಟ್ವಾಳದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಕ್ಷೇತ್ರದ ಜನತೆಯ ಮನವೊಲಿಸಿ ರೈಯವರ ವಿಜಯ ಪತಾಕೆ ಮತ್ತೊಮ್ಮೆ ಹಾರುವಂತೆ ಮಾಡಬೇಕು ಎಂದು ಶ್ರೀಧರ ಶೆಟ್ಟಿ ಹೇಳಿದರು. ರೈಗಳು ಅಧಿಕಾರದಲ್ಲಿದ್ದಾಗ ಸಾಕಷ್ಟು ಪ್ರಗತಿ ಕಾರ್ಯಗಳನ್ನು ಮಾಡಿದ್ದಾರೆ. ಕ್ಷೇತ್ರಕ್ಕಾಗಿ ಅವರ ಕೊಡುಗೆಗಳನ್ನು ಸ್ಮರಿಸಿಕೊಂಡು ಜನತೆ ಮತದಾನ ಮಾಡಬೇಕು ಎಂದು ದಾಮೋದರ ಶೆಟ್ಟಿ ತಿಳಿಸಿದರು.
ಈ ವೇಳೆ ಬಂಟ್ವಾಳ ತಾ.ಪಂ. ಮಾಜಿ ಉಪಾಧ್ಯಕ್ಷ ಉಸ್ಮಾನ್ ಕರೋಪಾಡಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಖಂಡಿಗ, ಯುವ ಕಾಂಗ್ರೆಸ್ ನ ಅಲ್ತಾಫ್ ಸಂಗಬೆಟ್ಟು, ಚುನಾವಣಾ ಕಚೇರಿ ಉಸ್ತುವಾರಿಗಳಾದ ನಾರಾಯಣ ನಾಯ್ಕ್, ಪರಮೇಶ್ವರ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.
