ಬಂಟ್ವಾಳ:ನೆರದ ಭಕ್ತಸಾಗರದ ಸಮಕ್ಷಮದಲ್ಲಿ ಬಿ.ಸಿ.ರೋಡಿನ ಚಂಡಿಕಾನಗರದ ಶ್ರೀ ಚಂಡಿಕಾ ಪರಮೇಶ್ವರೀ ಅಮ್ಮನವರಿಗೆ ಸೋಮವಾರ ವಿಜೃಂಭಣೆಯಿಂದ ಬ್ರಹ್ಮ ಕುಂಭಾಭಿಷೇಕ ಸಂಪನ್ನಗೊಂಡಿತು. ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ ಗಣಹೋಮ, 7.43ರ ಮೀನ ಲಗ್ನದಲ್ಲಿ ಅಷ್ಟಬಂಧ ಲೇಪನ, ಬಳಿಕ ಪರಿಕಲಶಾಭಿಷೇಕ ನಡೆದು ಶ್ರೀ ದೇವಿಗೆ ಬ್ರಹ್ಮಕುಂಭಾಭಿಷೇಕ ನಡೆಯಿತು.

ಅಪಾರ ಸಂಖ್ಯೆಯಲ್ಲಿ ಭಕ್ತರು ಈ ಸಂದರ್ಭ ಉಪಸ್ಥಿತರಿದ್ದು ಪುಣ್ಯದಾಯಕ ದೃಶ್ಯವನ್ನು ಕಣ್ತುಂಬಿಕೊಂಡು ಪುನೀತರಾದರು.ಬಳಿಕ ಅಲಂಕಾರ ನಡೆದು ಮಹಾಪೂಜೆ ಜರುಗಿ ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.

ಈ ಸಂದರ್ಭ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಮಹೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ, ಗೌರವಾಧ್ಯಕ್ಷ ತಿಮ್ಮಪ್ಪ ರೈ ಏರಿಮಾರ್, ಉಪಾಧ್ಯಕ್ಷ ಸದಾಶಿವ ನಾಯಕ್, ಕಾರ್ಯದರ್ಶಿ ಇಂದಿರೇಶ್, ಜತೆ ಕಾರ್ಯದರ್ಶಿ ಮಂಜುನಾಥ ಪೈ, ಕೋಶಾಧಿಕಾರಿ ಐತಪ್ಪ ಆಳ್ವ, ಬ್ರಹ್ಮಕಲಶ ಮಹೋತ್ಸವ ಸಮಿತಿ ಗೌರವಾಧ್ಯಕ್ಷರಾದ ಸದಾನಂದ ಶೆಟ್ಟಿ, ಸಂಜೀವ ಪೂಜಾರಿ, ಅಶ್ವನಿ ಕುಮಾರ್ ರೈ, ಚರಣ್ ಜುಮಾದಿಗುಡ್ಡೆ, ಪ್ರಮೋದ್ ಅಜ್ಜಿಬೆಟ್ಟು, ಪ್ರದೀಪ್ ರಾವ್ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ಬಿ.ರಾಮಚಂದ್ರ ರಾವ್, ಜೊತೆ ಕಾರ್ಯದರ್ಶಿ ಐತಪ್ಪ ಪೂಜಾರಿ, ಶಂಕರ್ ಶೆಟ್ಟಿ ನಡ್ಯೋಡಿಗುತ್ತು, ಕೋಶಾಧಿಕಾರಿ ಎಚ್. ಸಂಕಪ್ಪ ಶೆಟ್ಟಿ, ಮಹಿಳಾ ವೇದಿಕೆ ಸಂಚಾಲಕಿ ಆಶಾ ಪಿ. ರೈ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಶ್ರೀಧರ ಮಲ್ಲಿ, ಜಯರಾಮ ಶೆಟ್ಟಿ, ಸದಾನಂದ ಶೆಟ್ಟಿ, ಗೋಪಾಲ ಸುವರ್ಣ, ಸೋಮನಾಥ ನಾಯ್ಡು, ರಮೇಶ್ ಶೆಣೈ, ಬಿ. ಮೋಹನ್, ನೇಮಿರಾಜ ಶೆಟ್ಟಿ, ರಾಜೇಶ್ ಎಲ್. ನಾಯಕ್, ದಾಸಪ್ಪ ಶೆಟ್ಟಿ, ಪ್ರಶಾಂತ್ ಭಟ್ ವಿವಿಧ ಸಮಿತಿ ಪ್ರಮುಖರಾದ ಸತೀಶ್ ಭಂಡಾರಿ, ಬಿ. ವಿಶ್ವನಾಥ್ , ಸುಷ್ಮ ಚರಣ್, ರಾಘವೇಂದ್ರ ಬನ್ನಿಂತಾಯ, ಕೃಷ್ಣಪ್ಪ ಬಿ., ಹೇಮಾವತಿ, ಲಕ್ಷ್ಣ್ ರಾಜ್, ಗಂಗಾಧರ ಕುಲಾಲ ಮಠ, ವ್ಯವಸ್ಥಾಪಕ ಪ್ರಶಾಂತ್ ಬಿ.ಸಿ.ರೋಡು ಮೊದಲಾದವರು ಉಪಸ್ಥಿತರಿದ್ದರು. ಶಾಸಕ ರಾಜೇಶ್ ನಾಯಕ್ ಉಳಿಪಾಡಿ, ಮಾಜಿ ಸಚಿವರಾದ ಬಿ. ರಮಾನಾಥ ರೈ,ನಾಗರಾಜ ಶೆಟ್ಟಿ, ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಉಚಿತ ಕಬ್ಬಿನ ಹಾಲು ಸೇವೆ:
ಶ್ರೀ ಚಂಡಿಕಾಪರಮೇಶ್ವರ ದೇವಸ್ಥಾನದ ಬ್ರಹ್ಮಕಲಶ ಮಹೋತ್ಸವದ ಪ್ರಯುಕ್ತ ಶ್ರೀ ದುರ್ಗಾ ಜ್ಯೂಸ್‌ನ ಅನಿಲ್ ಹಾಗೂ ಶ್ರೀರಾಮ ಗೆಳೆಯರ ಬಳಗ , ಶ್ರೀ ಅಯ್ಯಪ್ಪ ಭಕ್ತ ವೃಂದ ಇವರಿಂದ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರೆಲ್ಲರಿಗೂ ಉಚಿತ ಕಬ್ಬಿನ ಹಾಲನ್ನು ಒದಗಿಸಲಾಯಿತು.
ಶಿಸ್ತುಬದ್ದ ಸೇವೆ:
ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಉಪಹಾರ,ಅನ್ನ ಪ್ರಸಾದ ಸ್ವೀಕರಿಸುತ್ತಿದ್ದು, ಹಿಂದೂ ಪರ ಸಂಘಟನೆ ,ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರು,ವಿಶೇಷ ವಾಗಿ ಮಹಿಳೆಯರು ಸ್ವಯಂಸೇವಕರಾಗಿ ನೀಡುತ್ತಿದ್ದ ಶಿಸ್ತಬದ್ದವಾದ ನಗುಮುಖದ ಸೇವೆ, ಶುಚಿತ್ವ,ಉಪಹಾರ ತಯಾರಿ,ಬಡಿಸುವುದು ಸೇರಿದಂತೆ ಎಲ್ಲಾ ಕಾರ್ಯದಲ್ಲು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ವ್ಯಾಪಕ ಪ್ರಶಂಸೆಗೂ ಪಾತ್ರವಾಯಿತು. ಬ್ರಹ್ಮಕಲಶ,ಜೀರ್ಣೋದ್ದಾರ,ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು,ಸದಸ್ಯರು ಸೇರಿದಂತೆ ಯುವಕರು,ಮಕ್ಕಳು ಮಹಿಳೆಯರು,ವೃದ್ದರು,ವೃದ್ಧೆಯರು ಸೇರಿದಂತೆ ಸಾವಿರಕ್ಕು ಅಧಿಕ ಮಂದಿ ಶ್ರೀ ಚಂಡಿಕಾ ಪರಮೇಶ್ವರೀಯ ಅಷ್ಟಬಂಧ ಬ್ರಹ್ಮಕಲಶದಲ್ಲಿ ಸ್ವಯಂಸೇವಕರಾಗಿ ಶ್ರಮಿಸಿದ್ದರು.ಸ್ಥಳೀಯ ವಿವಿಧ ಸಂಘಸಂಸ್ಥೆ,ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪಾರ್ಕಿಂಗ್ ಸಹಿತ ಎಲ್ಲಾ ವ್ಯವಸ್ಥೆಯಲ್ಲು ರಾತ್ರಿ,ಹಗಲು ದುಡಿದು ಸಂಘಟಕರ ಪ್ರಶಂಶೆಗೊಳಗಾದರು.
ಸೋಮವಾರ ರಾತ್ರಿ ಪೂಜೆಯ ನಂತರ ವಾರ್ಷಿಕ ಜಾತ್ರಾಮಹೋತ್ಸವದ ಹಿನ್ನಲೆಯಲ್ಲಿ ದರ್ಶನ ಬಲಿ,ವಿಶೇಷ ನರ್ತನ ಬಲಿ ಜರಗಿತು.
ಧಾರ್ಮಿಕ ಸಭೆ
ಭಾನುವಾರ ರಾತ್ರಿ ದೇವಸ್ಥಾನದಲ್ಲಿ ಧಾರ್ಮಿಕ ಸಭೆ ನಡೆಯಿತು.
ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀರಾಮ ಕ್ಷೇತ್ರ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ನಾವು ವಿದೇಶೀಯರ ಆಚಾರ, ವಿಚಾರಗಳನ್ನು ಅನುಸರಿಸುವ ಪ್ರವೃತ್ತಿ ಬಿಡಬೇಕು ಎಂದರು.
ಗುರುಪುರ ವಜ್ರದೇಹಿ ಮಠಾಧೀಶ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ ಶಾಲೆಯಲ್ಲಿ ಕೇವಲ ವಿದ್ಯೆಯೇ ದೊರಕಿತು ಹೊರತು ಸಂಸ್ಕಾರ ದೊರಕಿಲ್ಲ. ದೇವಸ್ಥಾನಕ್ಕೆ ಬಂದು ಧರ್ಮ, ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಹಿಂದು ಸಮಾಜದ ಮೇಲೆ ಆಕ್ರಮಣಗಳು ನಡೆಯುತ್ತಿದ್ದು, ತಮ್ಮ ರಕ್ಷಣೆಯನ್ನು ಒಟ್ಟಾಗಿ ಮಾಡಬೇಕು ಎಂದರು.
ಜಿಲ್ಲಾ ನ್ಯಾಯಾಧೀಶೆ ಕಲ್ಪನಾ ಚಂದ್ರಶೇಖರ್ ಮಾತನಾಡಿ, ಚಂಡಿಕಾಪರಮೇಶ್ವರಿ ಕೃಪೆಯಿಂದ ಇವತ್ತು ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು ಎಂದರು.
ಹೇರಂಭ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಸದಾಶಿವ ಶೆಟ್ಟಿ ಕುಳೂರುಕನ್ಯಾನ ಶುಭ ಹಾರೈಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ ಉಪಸ್ಥಿತರಿದ್ದರು. ಆರತಿ ಅಮೀನ್ ಸ್ವಾಗತಿಸಿದರು. ಮಹಿಳಾ ಸಮಿತಿ ಅಧ್ಯಕ್ಷೆ ಆಶಾ ಪಿ. ರೈ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.
