ಬಿ.ಸಿ.ರೋಡು: ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ೩೦ ರ ನೆನಪು ವಿಚಾರ ಸಂಕಿರಣ, ಅರಿವು ಯಾನ ಮಾಲಿಕೆ ಕೃತಿ ಬಿಡುಗಡೆ
ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ಸಮೀಪದ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ ಇದರ ೩೦ ರ ನೆನಪು ವಿಚಾರ ಸಂಕಿರಣ ಮತ್ತು ಅರಿವು ಯಾನ ಮಾಲಿಕೆ ಕೃತಿ ಬಿಡುಗಡೆ ಇದೇ ೨೩ರಂದು ಗುರುವಾರ ನಡೆಯಿತು. ಕೇಂದ್ರದ ಅಧ್ಯಕ್ಷ ಡಾ. ಕೆ.ತುಕಾರಾಮ ಪೂಜಾರಿ
ಧರ್ಮಸ್ಥಳ ಹೇಮಾವತಿ ವಿ. ಹೆಗ್ಗಡೆ ವಿಚಾರ ಸಂಕಿರಣ ಉದ್ಘಾಟಿಸಿ ಕೃತಿ ಬಿಡುಗಡೆಗೊಳಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂಡಂಬೈಲು ರವಿ ಶೆಟ್ಟಿ, ಡಾ.ಪಿ.ಎನ್. ನರಸಿಂಹಮೂರ್ತಿ, ಪ್ರೊ. ಕೆ. ಶಂಕರ ಭಟ್ ಇವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಜಿಲ್ಲೆಯ ‘ಪ್ರಾಚೀನ ಇತಿಹಾಸ ನೂರರ ನೆನಪು’ ಎಂಬ ವಿಷಯದ ಬಗ್ಗೆ ಉಡುಪಿ ಎಂಜಿಎ ಕಾಲೇಜಿನ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ. ಮಾಲತಿ ಮೂರ್ತಿ, ‘ಅಳುಪರು ಕರಾವಳಿ ಕರ್ನಾಟಕದ ಒಂದು ಪ್ರಾಚೀನ ಅರಸು ಮನೆತನ’ ಎಂಬ ವಿಷಯದ ಬಗ್ಗೆ ಇತಿಹಾಸ ಸಂಶೋಧಕ ಡಾ. ಪಿ.ಎನ್. ನರಸಿಂಹ ಮೂರ್ತಿ ವಿಶೇಷ ಉಪನ್ಯಾಸ ನೀಡಿದರು.
ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಅಧ್ಯಕ್ಷತೆಯಲ್ಲಿ ‘ಸ್ಮಾರಕ ಸಂರಕ್ಷಣೆ, ಸವಾಲುಗಳು ಮತ್ತು ಸಾಧ್ಯತೆಗಳು’ ವಿಷಯದ ಬಗ್ಗೆ ಸಂವಾದ ನಡೆಯಲಿದೆ. ಇತಿಹಾಸ ಸಂಶೋಧಕ ಡಾ. ಪಿ.ಎನ್. ನರಸಿಂಹ ಮೂರ್ತಿ ಸರ್ವಾಧ್ಯಕ್ಷತೆ ವಹಿಸಿದರು. ವಿದ್ವಾಂಸರಾದ ಎಂ. ಕುಲದೀಪ ಚೌಟ, ನಿರೇನ್ ಜೈನ್, ಡಾ. ಗಣಪತಿ ಗೌಡ ಮತ್ತಿತರ ಗಣ್ಯರು ಭಾಗವಹಿಸಿದ್ದರು.