ಪೊಳಲಿ ದೇವಳದ ಸಿಬ್ಬಂದಿ ವರ್ಗಕ್ಕೆ ಸನ್ಮಾನ
ಕೈಕಂಬ : ಬಂಟರ ಚಾವಡಿ(ರಿ) ಕುಡ್ಲ ಇದರ ೫ನೇ ವಾರ್ಷಿಕೋತ್ಸವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸರ್ವಮಂಗಳ ಸಭಾಭವನದಲ್ಲಿ ಗುರುವಾರ ನಡೆಯಿತು.ಈ ಸಂದರ್ಭದಲ್ಲಿ ಪೊಳಲಿ ದೇವಸ್ಥಾನದಲ್ಲಿ ಖಾಯಂ ಹಾಗೂ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುತ್ತಿರುವ ಅರ್ಚಕ ವೃಂದ, ಸ್ವಚ್ಚತಾ ಮತ್ತು ಸುರಕ್ಷಾ ಕರ್ಮಿಗಳ ಸಹಿತ ಎಲ್ಲ ೭೨ ಮಂದಿ ಸಿಬ್ಬಂದಿಯನ್ನು ಶಾಲು ಹೊದೆಸಿ, ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸಭಾಧ್ಯಕ್ಷತೆ ವಹಿಸಿದ್ದ ಎಂಆರ್ಪಿಎಲ್ ಸಂಸ್ಥೆಯ(ಮAಗಳೂರು) ಹಿರಿಯ ಪ್ರಬಂಧಕ ಸೀತಾರಾಮ ರೈ ಮಾತನಾಡಿ, ಉಳ್ಳವರಿಗೆ ಸನ್ಮಾನ ಸಾಮಾನ್ಯ ವಿಚಾರ. ಆದರೆ ಬಂಟರ ಚಾವಡಿ ಸಂಸ್ಥೆಯ ಅಧ್ಯಕ್ಷ ಗುರುಪುರ ಬೆಳ್ಳೂರುಗುತ್ತು ದಿನೇಶ್ ಶೆಟ್ಟಿ ಅವರು, ಪೊಳಲಿ ಶ್ರೀ ದೇವರ ಸೇವಕರಿಗೆ(ಅರ್ಚಕರು ಹಾಗೂ ದೇವಸ್ಥಾನದ ಕಾರ್ಮಿಕ ವರ್ಗ) ಸನ್ಮಾನ ಮಾಡಲು ಯೋಚಿಸಿರುವುದು ನಿಜಕ್ಕೂ ಶ್ಲಾಘನೀಯ. ನಿಜವಾದ ಅರ್ಥದಲ್ಲಿ ಇದು ಸಮಾಜಮುಖಿ ಕಾರ್ಯ ಎಂದರು.

ಗುರುಪುರ ದೋಣಿಂಜೆಗುತ್ತುವಿನ ಗಡಿಕಾರ ಪ್ರಮೋದ್ ಕುಮಾರ್ ರೈ ಮಾತನಾಡಿ, ಬಂಟರೆAದರೆ ಅನ್ಯಾಯ ಪ್ರಶ್ನಿಸುವ ಹಾಗೂ ಧರ್ಮ ರಕ್ಷಿಸುವ ವರ್ಗ. ದೇವಸ್ಥಾನದ ಸಿಬ್ಬಂದಿಗಳಿಗೆ ಸನ್ಮಾನವೆಂದರೆ ದೇವರಿಗೆ ಪ್ರಿಯವಾದ ಕೆಲಸ. `ಚಾವಡಿ’ ಸಂಸ್ಥೆಯಲ್ಲಿ ಹುಟ್ಟಿಕೊಂಡಿರುವ ಅಂತಹ ಸೂಕ್ಷö್ಮ ಯೋಚನೆಗೆ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಬಂಟ್ಸ್ ಅಸೋಸಿಯೇಶನ್ ಹವೇಳಿ ಇದರ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಹೆಗ್ಡೆ, ದಿನೇಶ್ ಶೆಟ್ಟಿ ಸುರತ್ಕಲ್, ಬಾಲಕೃಷ್ಣ ಶೆಟ್ಟಿ ಕೆಂಚನೂರು(ಸುರತ್ಕಲ್ ಬಂಟರ ಸಂಘದ ನಿರ್ದೇಶಕ), ಯಶವಂತ ಕುಮಾರ್ ಶೆಟ್ಟಿ(ಗುರುಪುರ ಪಂಚಾಯತ್ ಅಧ್ಯಕ್ಷ), ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಸೂರ್ಯಾನಾರಾಯಣ ರಾವ್ ಚೇರ(ಮೊಕ್ತೇಸರ, ಶ್ರೀ ಕ್ಷೇತ್ರ ಪೊಳಲಿ), ವೆಂಕಟೇಶ್ ನಾವಡ, ಪ್ರವೀಣ್(ಆಡಳಿತಾಧಿಕಾರಿ ಶ್ರೀ ಕ್ಷೇತ್ರ ಪೊಳಲಿ), ಶ್ರೀ ಕ್ಷೇತ್ರ ಪೊಳಲಿಯ ಪವಿತ್ರಪಾಣಿ ಮಾಧವ ಭಟ್, ರಮೇಶ್ ಶೆಟ್ಟಿ ಸಿದ್ಧಕಟ್ಟೆ, ಬಂಟರ ಚಾವಡಿಯ ಸರ್ವ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಬಂಟರ ಚಾವಡಿ ಅಧ್ಯಕ್ಷ ದಿನೇಶ್ ಶೆಟ್ಟಿ ಬೆಳ್ಳೂರುಗುತ್ತು ಸ್ವಾಗತಿಸಿದರು. ಬಂಟರ ಚಾವಡಿ ಮಂಗಳೂರು ಇದರ ಸಲಹೆಗಾರ ಜಗದೀಶ ಶೆಟ್ಟಿ ಪಂಜಿನಡ್ಕ ಮೂಲ್ಕಿ ಪ್ರಸ್ತಾವಿಸಿದರು. ಉಪನ್ಯಾಸಕಿ ಅರ್ಪಿತಾ ಶೆಟ್ಟಿ ನಿರೂಪಿಸಿದರು. ಪಡ್ರೆ ಚಾವಡಿಮನೆ ಶಶಿಕಲಾ ಶೆಟ್ಟಿ ವಂದಿಸಿದರು. ಬಳಿಕ ರಾಜೇಶ್ ರೈ ಅಡ್ಕ ಸಾರಥ್ಯದಲ್ಲಿ `ಯಕ್ಷಗಾನ-ಹಾಸ್ಯ-ನಾಟ್ಯ ವೈಭವ’ ಕಾರ್ಯಕ್ರಮ ನಡೆಯಿತು.
