ಕೈಕಂಬ:ಎಸ್. ಆರ್. ಫ್ರೆಂಡ್ಸ್ ಪೊಳಲಿ ಇದರ ವತಿಯಿಂದ ಪೊಳಲಿಯಲ್ಲಿ ಫೆ.೧೧ರಂದು ಶನಿವಾರ ಸಾರ್ವಜನಿಕ ಸತ್ಯನಾರಾಯಣ ಪೂಜೆ ,ವರ್ಧಂತ್ಯುತ್ಸವ ನೂತನ ಆಂಬ್ಯುಲೆನ್ಸ್ ಲೋಕಾರ್ಪಣೆಗೊಳ್ಳಲಿದೆ.


ಪೊಳಲಿ ರಾಮಕೃಷ್ಣ ೬ತಪೋವನದ ವಿಶ್ವಭಾವೈಕ್ಯ ಮಂದಿರದಲ್ಲಿ ವೇದಮೂರ್ತಿ ಶ್ರೀ ಕೆ.ಅನಂತಪದ್ಮನಾಭ ಉಪಾಧ್ಯಾಯರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನರವೇರಲಿದೆ.
ಮಧ್ಯಾಹ್ನ ೧೨ ಕ್ಕೆ ಧಾರ್ಮಿಕ ಸಭೆ ನಡೆಯಲಿದೆ.ಧಾರ್ಮಿಕ ಉಪನ್ಯಾಸವನ್ನು ಶ್ರೀ ಪುಂಡರೀಕಾಕ್ಷ ಯೋಗಾಚಾರ್ಯ ಬೆಳ್ಳೂರು ಕಾಸರಗೋಡು ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿ ಶ್ರೀ ಯು.ತಾರನಾಥ ಆಳ್ವ ಅನುವಂಶಿಕ ಮೊಕ್ತೇಸರರು ಪೊಳಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ೨.೩೦ಕ್ಕೆ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ “ಗಾನ ವೈಭವ” ಸಂಜೆ ಗಂಟೆ ೬ರಿಂದ ಶ್ರೀ ವಿಠಲ್ ನಾಯಕ್ ಕಲ್ಲಡ್ಕ ಮತ್ತು ತಂಡದವರಿಂದ “ಗೀತ ಸಾಹಿತ್ಯ ಸಂಭ್ರಮ”
ರಾತ್ರಿ ೮ ಗಂಟೆಗೆ ಸಭಾ ಕಾರ್ಯಕ್ರಮ -ಸನ್ಮಾನ ಹಾಗೂ “ಉಳಿಪಾಡಿಗುತ್ತು ದಿ.ರಮೇಶ್ ನಾÊಕ್ ಇವರ ಸ್ಮರಣಾರ್ಥ ಆರೋಗ್ಯ ಸುರಕ್ಷಾ ಆಂಬ್ಯುಲೆನ್ಸ್ ಲೋಕಾರ್ಪಣೆ”ಗೊಳ್ಳಲಿದೆ.


ಆಶೀರ್ವಚನ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಆಶೀರ್ವಚನ ನೀಡಲಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾÊಯ್ಕ್ ಉಳಿಪಾಡಿ ಅಧ್ಯಕ್ಷತೆ ವಹಿಸಲಿದ್ದಾರೆ.ಕಲ್ಲಡ್ಕ ಪ್ರಭಾಕರ ಭಟ್ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ , ಪೊಳಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು,ಪೊಳಳಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಪೊಳಲಿ ದೇವಸ್ಥನದ ಅರ್ಚಕ ನಾರಾಯಣ ಭಟ್, ಕೊಡ್ಮಾನ್ ಕಾಂತಪ್ಪ ಶೆಟ್ಟಿ, ಪೊಳಲಿ ಜಯರಾಮ್ ಕೃಷ್ಣ ಪೊಳಲಿ, ವೆಂಕಟೇಶ್ ನಾವಡ ಪೊಳಲಿ, ಸಂದೀಪ್ ಪೊಳಲಿ,ರಾಜೇಶ್ ಪಡ್ಪು ಮುಂತಾದವರು ಭಾಗವಹಿಸಲಿದ್ದಾರೆ.
ಸನ್ಮಾನಿಸಲ್ಪಡುವವರು: ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ, ಅಂಗನವಾಡಿ ಶಿಕ್ಷಕಿ ಕಮಾಲಾಕ್ಷಿ ರಾವ್ ಎಂದು

ರಾತ್ರಿ ಗಂಟೆ ೯ ರಿಂದ ಝೀ ಕನ್ನಡ ಕುಣಿಯೋಣ ಬಾರೋ ,ಉದಯ ಟಿವಿ, ಈ ಟಿವಿ, ಸೋನಿ ಬೂಗಿ ಬೂಗಿ ಮಂಗಳೂರು ಚಾನೆಲ್ ವಿಜೇತ ತಂಡ ಎಕ್ಸ್ ಫ್ರೈಸನ್ ಆರ್ಟ್ಸ್ ಮಂಗಳೂರು ಇವರಿಂದ ಡ್ಯಾನ್ಸ್ ಕಾರ್ಯಕ್ರಮ ರಾತ್ರಿ ಗಂಟೆ ೧೦.೩೦ರಿಂದ ರೂಪಕಲಾ ಕುಳ್ಳಪ್ಪು ಕುಂದಾಪುರ ದಿ.ಕೆ.ಬಾಲಕೃಷ್ಣ ಪೈ ಕುಳ್ಳಪ್ಪು ವಿರಚಿತ ಸತೀಶ್ ಪೈ ನಿರ್ದೇಶನದ ಅಂತರ್ ರಾ‌ಷ್ಟ್ರೀಯ ಖ್ಯಾತಿಯ “ಮೂರು ಮುತ್ತು” ಹಾಸ್ಯಮಯ ನಗೆ ನಾಟಕ
ಎಸ್.ಆರ್.ಹಿಂದು.ಫ್ರೆಂಡ್ಸ್ ಇದರ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *