ಕುಪ್ಪೆಪದವು:ಶ್ರೀ ದುರ್ಗೇಶ್ವರೀ ದೇವಿಯ ಪುನರ್ ಪ್ರತಿಷ್ಠೆ
ಕೈಕಂಬ: ಜೀರ್ಣೋದ್ದಾರಗೊಂಡ ಕುಪ್ಪೆಪದವು ಶ್ರೀ ದುರ್ಗೇಶ್ವರೀ ದೇವಿಯ ನೂತನ ಶಿಲಾಮಯ ದೇಗುಲದಲ್ಲಿ ದೇವಿಯ ಭವ್ಯ ಮೂರ್ತಿಯ ಪುನರ್ ಪ್ರತಿಷ್ಠೆ ಸಾವಿರಾರು ಭಕ್ತರ ಜಯಘೋಷ, ಋತ್ವಿಜರ ಮಂತ್ರ ಘೋಷಗಳೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ರಾಧಾ ಕೃಷ್ಣ ತಂತ್ರಿಗಳು ಎಡಪದವು ಇವರ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆಗೆ ನಡೆಯಿತು.
ಜತೆಗೆ ನೂತನ ಗಣಪತಿ ಗುಡಿಯಲ್ಲಿ ಮಹಾಗಣಪತಿ, ನಾಗಸನ್ನಿಧಿಯಲ್ಲಿ ನಾಗಬಿಂಬ ಮತ್ತು ಕೊಡಮಣಿತ್ತಾಯ ಗುಡಿಯಲ್ಲಿ ಭಕ್ತರು ಸಮರ್ಪಿಸಿದ ಕೊಡಮಣಿತ್ತಾಯ ದೈವದ ನೂತನ ಬಿಂಬವನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ಕಲಶಾಭಿಷೇಕ ನಡೆಯಿತು.
ಜೀರ್ಣೋದ್ದಾರ ದ ವೇಳೆ ಬಾಲಾಲಯದಲ್ಲಿ ಪ್ರತಿಷ್ಟಾಪಿಸಲಾಗಿದ್ದ ದೇವಿಯ ಮೂರ್ತಿಯನ್ನು ಬುಧವಾರ ಸಂಜೆ ನೂತನ ದೇಗುಲಕ್ಕೆ ತಂದು ಮಹಾಗಣಪತಿ ಮತ್ತು ದೈವದ ಬಿಂಬಗಳ ಸಹಿತ ಬಿಂಬಾಧಿವಾಸ ನಡೆಸಿ, ಅಧಿವಾಸ ಹೋಮ ಮತ್ತು ನಾಗದೇವರ ಪ್ರತಿಷ್ಠಾ ಹೋಮಗಳನ್ನು ನಡೆಸಲಾಗಿತ್ತು.
ಮ್ಯಾನೇಜಿಂಗ್ ಟ್ರಷ್ಟಿ ಪ್ರವೀಣ್ ಕುಮಾರ್ ಅಗರಿ, ಉಪ ಮ್ಯಾನೇಜಿಂಗ್ ಟ್ರಷ್ಟಿ ತುಳಸಿದಾಸ್ ಅಮೀನ್, ಟ್ರಸ್ಟಿಗಳಾದ ಉಮೇಶ್ ಅಮೀನ್ ನಾಗಂದಡಿ, ಪುರುಷೋತ್ತಮ್.ಕೆ.. ಶ್ರೀಮತಿ ವಸಂತಿ, ಪ್ರಧಾನ ಅರ್ಚಕ ವೇದಮೂರ್ತಿ ಸದಾಶಿವ ಕಾರಂತ, ಉಪಸಮಿತಿಯ ಸದಸ್ಯರು.ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ್ ಪಾಕಜೆ, ಕಾರ್ಯಾಧ್ಯಕ್ಷ ವಿನೋದ್ ಕುಮಾರ್ ಅಂಬೆಲೋಟ್ಟು, ಪ್ರಧಾನ ಕಾರ್ಯದರ್ಶಿ ಮಹಾಬಲ ಸಾಲ್ಯಾನ್, ಕೋಶಾಧಿಕಾರಿ ವಿನಯ ಕಾರಂತ, ಜತೆ ಕೋಶಾಧಿಕಾರಿಗಳಾದ ಹರೀಶ್ ಸುವರ್ಣ, ಅಶೋಕ್ ಕಟ್ಟೆಮಾರ್, ಮಹಿಳಾ ವಿಭಾಗದ ಅಧ್ಯಕ್ಷೆ ಹರ್ಷಲತಾ ಬಳ್ಳಾಜೆ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ ಅರ್ಜುನ್ ಪಂಡಿತ್, ಉಪಾಧ್ಯಕ್ಷರುಗಳಾದ ರಾಮಚಂದ್ರ ಸಾಲ್ಯಾನ್ ತಾಳಿಪಾಡಿ, ನೀಲಯ ಎಂ. ಅಗರಿ, ಜತೆ ಕೋಶಾಧಿಕಾರಿ ಗಿರೀಶ್ ಆಳ್ವ ಜತೆ ಕಾರ್ಯದರ್ಶಿ ಉದಯ ಕುಮಾರ್ ಚಂದ್ರಮಜಲ್ ಹಾಗೂ ಎರಡೂ ಸಮಿತಿಗಳ ಉಪಾಧ್ಯಕ್ಷರುಗಳು, ಗೌರವ ಸಲಹೆಗಾರರು, ಸದಸ್ಯರು, ಕಿಲೆಂಜಾರು, ಮುತ್ತೂರು ಮತ್ತು ಕುಲವೂರು ಗ್ರಾಮಗಳ ಗಣ್ಯರು, ಧಾರ್ಮಿಕ ಮುಖಂಡರುಗಳು, ಭಕ್ತಾದಿಗಳು ಪಾಲ್ಗೊಂಡಿದ್ದರು.