ಮತ್ತಷ್ಟು ಜಟಿಲವಾದ ಇಷಿಕಾ ನಾಪತ್ತೆ ಪ್ರಕರಣ
ಮಂಗಳೂರು: ಉಡುಪಿಯ ಶಾರದಾ ರೆಸಿಡೆನ್ಷಿಯಲ್ ವಸತಿನಿಲಯದ ವಿದ್ಯಾರ್ಥಿನಿ ಇಶಿಕಾ ಶೆಟ್ಟಿ(13) ನಾಪತ್ತೆಯಾಗಿ 10 ದಿನ ಕಳೆದರೂ ಆಕೆಯ ಸುಳಿವನ್ನು ಪತ್ತೆಹಚ್ಚಲು ಪೊಲೀಸರು ವಿಫಲವಾಗಿದ್ದು, ಬಾಲಕಿ ಬದುಕಿದ್ದಾಳೋ, ಇಲ್ಲವೋ ಎಂಬ ಹೊಸ ಸಂಶಯ ಸೃಷ್ಟಿಯಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಶಿಕಾ ಕಿರುತೆರೆ ನಟ ಫೈಝಲ್ ಖಾನ್ಗೆ ಬರೆದಿದ್ದ ಪತ್ರ ಆತನಿಗೆ ತಲುಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಶಿಕಾ ಫೈಝಲ್ ಖಾನ್ನನ್ನು ಹುಡುಕಲು ಮುಂಬೈಗೆ ತೆರಳಿರಬಹುದೆಂಬ ಸಂಶಯಗಳಿದ್ದರೂ ಅದನ್ನು ದೃಢೀಕರಿಸಲು ಸಾಧ್ಯವಾಗಿಸುವಂಥ ಆಧಾರಗಳು ಇನ್ನೂ ಸಿಕ್ಕಿಲ್ಲ. ಯಾಕೆಂದರೆ ಇಶಿಕಾ ಇನ್ನೂ 13ರ ಬಾಲಕಿಯಾಗಿದ್ದು, ಪ್ರಾಯ ಪ್ರಬುದ್ಧತೆ ಇಲ್ಲದ ಬಾಲಕಿ ಮುಂಬೈಗೆ ತೆರಳಿರುವುದಾದರೂ ಹೇಗೆ ಎಂಬ ಸಂಶಯಗಳೂ ಹುಟ್ಟಿಕೊಂಡಿವೆ. ಆದರೂ ಸಹ ಬಾಲಕಿ ಐದನೆಯ ತರಗತಿಯವರೆಗೆ ಮುಂಬೈಯಲ್ಲಿ ಕಲಿತಿರುವುದರಿಂದ ಆಕೆಗೆ ಮುಂಬೈ ಪರಿಚಿತ ನಗರವಾಗಿದ್ದು ಖಾನ್ನನ್ನು ಹುಡುಕುತ್ತಾ ಸಾಗಿರಬಹುದೆಂದು ಇನ್ನೊಂದು ಸಂಶಯ ಹುಟ್ಟಿಕೊಂಡಿದೆ. ಯಾಕೆಂದರೆ ಆಕೆ ನಾಪತ್ತೆಯಾಗುವ ಮುನ್ನ ತನ್ನ ಬಟ್ಟೆಬರೆಗಳಿರುವ ಬ್ಯಾಗನ್ನೂ ಸಹ ಸಾಗಿದ್ದಾಳೆ ಎನ್ನಲಾಗುತ್ತಿದೆ.

IMG-20141119-WA0044

ಒಂಟಿತನ ದೂರ ಮಾಡಲು ಹೋಗಿ…..
ಮನುಷ್ಯನನ್ನು ಒಂಟಿತನ ಕಾಡಿದರೆ ಏಕತಾನತೆ ಉಂಟಾಗುತ್ತದೆ. ಒಂಟಿತನ ಯಾರಿಗೂ ಬೇಡ. ತನ್ನವರಿಂದ ದೂರ ಸಾಗಿ ಹೋಮ್ಸಿಕ್ನೆಸ್ನಿಂದ ಬಳಲುವ ಹರೆಯದ ಮಕ್ಕಳು ಒಂಟಿತನ ನಿವಾರಣೆಗಾಗಿ ಏನಾದರೊಂದು ಐಡಿಯಾ ಹುಡುಕುತ್ತಾರೆ. ಅಲ್ಲದೆ ಬಾಲಕಿ ತನ್ನ ಹೆತ್ತವರಿಂದ ದೂರವಾಗಿ ವಸತಿನಿಲಯದಲ್ಲಿ ಇದ್ದ ಕಾರಣ ಆಕೆಯನ್ನ ಒಂಟಿತನ ಬಹಳ ಕಾಡಿರಬಹುದು. ಈ ಒಂಟಿತನದಿಂದ ಖಿನ್ನತೆ(ಡಿಪ್ರೆಷನ್) ಕಾಡುತ್ತದೆ. ಇದನ್ನು ದೂರಗೊಳಿಸಲು ಇಶಿಕಾ ಹಲವಾರು ಪ್ರಯತ್ನ ಪಟ್ಟಿರುವುದು ಆಕೆಯ ಡೈರಿಯನ್ನು ಕಂಡಾಗ ಗೊತ್ತಾಗುತ್ತದೆ. ಖಿನ್ನತೆಯ ಲಕ್ಷವೆಂದರೆ ತನ್ನ ಮನಸ್ಸಿನ ಚಿಂತೆಯನ್ನು ದೂರ ಮಾಡಲು ಏನಾದರೊಂದು ಚಟುವಟಿಕೆ ಮಾಡುತ್ತಾರೆ. ಆದರೆ ಅದರಿಂದಲೂ ಹೊರಬರಲಾರದೆ ಮತ್ತಷ್ಟು ತೊಳಲಾರಂಭಿಸುತ್ತಾರೆ. ಇದೇ ರೀತಿಯ ಬಾಧೆಎ ಇಶಿಕಾ ಬಲಿಯಾಗಿರುವ ಸಾಧ್ಯತೆಯೂ ಇದೆ.

ishika death note2

ಮುಖದ ಚಿತ್ರ ಏನ್ನನ್ನು ಸೂಚಿಸುತ್ತದೆ ಎಂದರೆ…
ಸಾಮಾನ್ಯವಾಗಿ ಕೈಗೆ ಪೆನ್ನು ಸಿಕ್ಕರೆ ಮನುಷ್ಯ ಸ್ವಗತ ವೆಂಬಂತೆ ತನ್ನ ಸಹಿಯನ್ನು ಹಾಕುತ್ತಾನೆ. ಅಥವಾ ಯಾವೂದಾದರೂ ಚೌಕುಳಿ ಆಕೃತಿ, ಗೆರೆ ಮುಂತಾದುವುಗಳನ್ನು ಬಿಡಿಸುತ್ತಾನೆ. ಹೀಗೆ ಸ್ವಗತ ಎಂಬಂತೆ ಬಿಡಿಸುವ ಚಿತ್ರಗಳಿಗೆ ಹಲವಾರು ಅರ್ಥಗಳನ್ನು ಮನೋವಿಶ್ಲೇಷಕರು ತಿಳಿಸುತ್ತಾರೆ. ಚಿತ್ರದಲ್ಲಿ ದಪ್ಪ ಬಿಂದು, ಒತ್ತಕ್ಷರ ಕಂಡುಬಂದರೆ ಆತ ತುಂಬಾ ಚಿಂತೆಯಲ್ಲಿದ್ದಾನೆ ಎನ್ನುವುದನ್ನು ತಿಳಿಸುತ್ತದೆ. ಅದೇ ರೀತಿ ಒಬ್ಬ ಮನುಷ್ಯ ಮಖದ ಚಿತ್ರವನ್ನು ಬಿಡಿಸಿದ್ದಾನೆಂದರೆ ಆತನ ಮನಸ್ಸಿನಲ್ಲಿ ವೇದನೆ ತುಂಬಿದೆ ಎಂದು ಅರ್ಥ. ಅದೇ ರೀತಿ ಇಶಿಕಾ ಬರೆದಿರುವ ಚಿತ್ರದಲ್ಲೂ ಮುಖದ ಚಿತ್ರಗಳಿರುವುದನ್ನು ಗಮನಿಸಬಹುದು.

ishika death note.

ಫೈಝಲ್ ಖಾನ್ ಯಾಕೆ ಇಷ್ಟವಾದನೆಂದರೆ….
ಸಾಮಾನ್ಯವಾಗಿ ಐದು ವರ್ಷದಿಂದ 14 ವರ್ಷದವರೆಗೆ ಮಕ್ಕಳಿಗೆ ತನ್ನ ತಂದೆ-ತಾಯಿಯೇ ಹೀರೋಗಳು ಆಗಿರುತ್ತಾರೆ. ತದನಂತರ ತನ್ನ ತಂದೆತಾಯಿ ಮೇಲಿನ ಆಸಕ್ತಿ ಕಳೆದು ತನ್ನ ಗೆಳೆಯರ ಮೇಲೆ ಆಸಕ್ತಿ ಹುಟ್ಟುತ್ತದೆ. ಹರೆಯ ಆರಂಭವಾದ ನಂತರ ಮಕ್ಕಳಿಗೆ ತನ್ನ ವಿರುದ್ಧ ಲಿಂಗಿಗಳ ಮೇಲೆ ಆಸಕ್ತಿ ಜಾಸ್ತಿ. ಆದರೆ ತಂದೆತಾಯಿಯ ಬಗ್ಗೆ ಆಸಕ್ತಿ ಕೊಂಚ ಕಡಿಮೆಯಾಗುತ್ತದೆ. ತನ್ನ ಹೆತ್ತವರು ತನ್ನನ್ನು ನಿಜವಾಗಿಯೂ ಪೀತಿಸುತ್ತಾರೋ, ಅಥವಾ ತೋರಿಕೆ ಪ್ರೀತಿಯೋ ಎಂಬ ಅನುಮಾನಗಳು ಕಾಡುತ್ತದೆ. ಆದರೆ ಇದೇ ವೇಳೆ ಇಶಿಕಾ ಹೆತ್ತವರು ತನ್ನಿಂದ ದೂರವಾಗಿರುವ ಕಾರಣ ಆಕೆಗೆ ತನ್ನ ಹೆತ್ತವರ ಬಗ್ಗೆ ನಿಜವಾಗಿಯೂ ಅನುಮಾನ ಕಾಡಿತ್ತಲ್ಲದೆ ಧ್ವೇಷ ಮೂಡಿರುವ ಸಾಧ್ಯತೆಯೂ ಇದೆ. ಇದೇ ಸಮಯಕ್ಕೆ ಆಕೆಗೆ ಫೈಝಲ್ ಖಾನ್ ಇಷ್ಟವಾಗಿದ್ದು ಯಾಕೆಂದರೆ ಆಕೆ ಪೈಝಲ್ಖಾನ್ನ ಧಾರವಾಹಿಯನ್ನು ನೋಡಿದ್ದಾಳೆ. ಈ ಏಜಲ್ಲಿ ಒಂದು ಹೀರೋಇಸಂ ಹುಟ್ಟಿಕೊಳ್ಳುತ್ತದೆ. ಕೆಲವರಿಗೆ ಈ ವಯಸ್ಸಲ್ಲಿ ವಿವೇಕಂದ, ಮಹತ್ಮಾಗಾಂಧೀಜಿ ಯಂಥಹಾ ವ್ಯಕ್ತಿಗಳು ಇಷ್ಟವಾದರೆ ಕೆಲವರಿಗೆ ಸಿನಿಮಾ ನಟರು ಇಷ್ಟವಾಗುತ್ತಾರೆ. ಇಶಿಕಾಗೂ ಫೈಝಲ್ ಯಾವುದೋ ಆಂಗಲಲ್ಲಿ ಇಷ್ಟವಾಗಿರಬಹುದು. ಆತನ ನಟನೆಯಲ್ಲಿ ಆಕೆಗೆ ಮನದಲ್ಲಿ ಯಾವುದಾರೊಂದು ಸಾಂತ್ವಾನ ಸಿಕ್ಕಿರಬಹುದು. ತನ್ನ ಒಂಟಿತನ ಭಾವನೆಯನ್ನು ಹೇಗಾದರೂ ಹೋಗಲಾಡಿಸಬೇಕೆಂಬ ಉದ್ದೇಶದಿಂದ ಆಕೆ ಹುಚ್ಚುನಿರ್ಧಾರಕ್ಕೆ ಬಿದ್ದು ಮಹೋನ್ನತ ಭ್ರಾಂತಿಯಿಂದ ಹಾಸ್ಟೆಲ್ ಬಿಟ್ಟು ತೆರಳಿರಬಹುದು.

ishi1
ಉದಾಹರಣೆಗೆ ಕೆಲವು ವರ್ಷಗಳ ಹಿಂದೆ ನಟ ಗಣೇಶ್ ಮದುವೆಯಾದ ನಂತರ ಆಕೆಯನ್ನು ಭ್ರಾಂತಿಯಿಂದ ಪ್ರೀತಿಸಿ ಆತ ತನ್ನ ಕೈಗೆ ಸಿಗಲಿಲ್ಲ ಎಂಬ ನಿರ್ಧಾರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೇ ರೀತಿಯ ಮನೋವೇದನೆಯಿಂದ ಇಶಿಕಾಳೂ ಬಳಲುತ್ತಿದ್ದಾಳೆ ಎಂಬುದುನ್ನು ಇದರಿಂದ ಅರ್ಥ ಮಾಡಿಕೊಳ್ಳಬಹುದು. ಆದರೆ ಇದನ್ನು ಪ್ರೀತಿಸುತ್ತಿದ್ದಾರೆ ಎನ್ನಲು ಸಾಧ್ಯವಿಲ್ಲ.

ಹಾಸ್ಟೆಲ್ ವಾತಾವರಣವೂ ಪರಿಣಾಮ ಬಿದ್ದಿರಬಹುದು:
ಉಡುಪಿಯ ಶಾರದಾ ರೆಸಿಡೆನ್ಷಿಯಲ್ನ ವಾತಾವರಣ ಹೇಗಿತ್ತು ಎಂಬುದೂ ಕೂಡಾ ಇಶಿಕಾ ನಾಪತ್ತೆ ಹಿಂದೆ ಪರಿಣಾಮ ಬಿದ್ದಿರುವ ಸಾಧ್ಯತೆ ಇದೆ. ಯಾಕೆಂದರೆ ಹಾಸ್ಟೆಲ್ ತುಂಬಾ ಶಿಸ್ತುಬದ್ಧವಾಗಿದ್ದರೆ, ಅಥವಾ ವಾರ್ಡನ್ ಯಾವಾಗಲೂ ಬಯ್ಯುತ್ತಲೇ ಇದ್ದರೆ ಮಕ್ಕಳು ತುಂಬಾ ಕುಗ್ಗಿಹೋಗುತ್ತಾರೆ. ಹಾಸ್ಟೆಲ್ನ ಅತಿ ಶಿಸ್ತಿನಿಂದ ಸ್ವತಂತ್ರ ಕಳೆದುಕೊಂಡ ಭಾವನೆಯನ್ನು ಬೆಳೆಸಿಕೊಂಡ ಇಶಿಕಾ ನಾಪತ್ತೆ ಹಿಂದೆ ಹಾಸ್ಟೆಲ್ ವಾತಾವರಣೂ ಪರಿಣಾ ಬಿದ್ದಿರುವ ಸಾಧ್ಯತೆಯನ್ನೂ ತಳ್ಳಹಾಕುವಂತಿಲ್ಲ.
ಮಕ್ಕಳ ಮನಸ್ಸನ್ನು ಸೂಕ್ತವಾಗಿ ಅರ್ಥೈಸಿ ಅದಕ್ಕೆ ಸೂಕ್ತವಾಗಿ ಸ್ಪಂದನೆ ನೀಡಿದರೆ ಮಕಳಿಗೆ ಒಂಟಿತನ ಭಾವನೆ ಕಾಡುವುದಿಲ್ಲ ಎಂಬುದು ಇಶಿಕಾ ನಾಪತ್ತೆ ಪ್ರಕರಣ ತಿಳಿಸುತ್ತದೆ.

-ಚೇಕಿತಾನ

By suddi9

Leave a Reply

Your email address will not be published. Required fields are marked *