ಬಂಟ್ವಾಳ:ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಪ.ಪೂ.೧೦೮ ವೀರಸಾಗರ ಮುನಿ ಮಹಾರಾಜರ ಅವರ ಆಶ್ರೀರ್ವಾದ ಪಡೆದರು.ಶಾಸಕರ ಗ್ರಾಮವಿಕಾಸ ಯಾತ್ರೆಯ ಸಂದರ್ಭದಲ್ಲಿ ರಾಯಿಯಲ್ಲಿಸಿದ್ದಕಟ್ಟೆಯಿಂದ ಪಾಣೆಮಂಗಳೂರು ಶ್ರೀ ಅನಂತನಾಥ ಸ್ವಾಮಿ ಬಸದಿಗೆ ವಿಹಾರ ಮಾಡುತ್ತಿದ್ದ ಪ.ಪೂ.೧೦೮ ಮುನಿಶ್ರೀ ವೀರ ಸಾಗರ ಮಹಾರಾಜರ ಅವರನ್ನು ಶಾಸಕರು ಪಾದಯಾತ್ರೆಯ ದಾರಿ ಮಧ್ಯೆ ಬೇಟಿಯಾಗಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ರಾಜ್ಯ ನಗರ ನೀರು ಸರಬರಾಜು, ಒಳಚರಂಡಿ ನಿಗಮ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್,ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಸುದರ್ಶನ್ ಬಜ , ಪ್ರಕಾಶ್ ಅಂಚನ್, ಶರ್ಮಿತ್ ಜೈನ್,ವೀರೇಂದ್ರ ಜೈನ್, ಸಂತೋಷ್ ಜೈನ್,ಸುಭಾಷ್ ಚಂದ್ರ ಜೈನ್, ವೃಷಭರಾಜ್ ಇಂದ್ರ, ಸುಜಿತ್ ಜೈನ್ ವಾಮದಪದವು,ಮದ್ವರಾಜ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
