ವಿಟ್ಲ:ಸರಕಾರಿ ಪ್ರೌಢಶಾಲೆಯಲ್ಲಿ 2 ದಿನಗಳ ಕಲಿಕಾ ಹಬ್ಬಆಚರಣೆ
ವಿಟ್ಲ:ಸರಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ಎ) ವಿಟ್ಲ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ವಿಟ್ಲ ಇವರ ಸಹಯೋಗದೊಂದಿಗೆ ಜ.24 ಮತ್ತು ಜ.25ರಂದು 2 ದಿನಗಳ ಕಲಿಕಾ ಹಬ್ಬವನ್ನು ನಡೆಸಲಾಯಿತು.

ಜ.24ರಂದು ನಡೆದ ಸಭಾಕಾರ್ಯಕ್ರಮದಲ್ಲಿ ರವಿಪ್ರಕಾಶ್ ವಿಟ್ಲ, ಕೌನ್ಸಿಲರ್ ಪಟ್ಟಣ ಪಂಚಾಯತ್ ವಿಟ್ಲ ,ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ವಿಠಲ್ ನಾಯಕ್, ಕೆ, ಪ್ರವೀಣ್, ಅನಿಲ್ ವಡಗೇರಿ, ಮೇರಿ ಡಿ’ಸೋಜ, ವಾಣಿಶ್ರೀ , ಪುಷ್ಪಾವತಿ ಕಲಿಕಾ ಹಬ್ಬದ ಆಶಯ ಗೀತೆಯನ್ನು ಹಾಡಿದರು. ಹಾಗೂ ಮಕ್ಕಳಿಗೆ ಕಲಿಕಾ ತರಬೇತಿಗಳನ್ನು ನೀಡಿದರು.
ಶಾಲಾ ಮಕ್ಕಳು ವಿಶಿಷ್ಟ ಚಟುವಟಿಕೆಯ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ಕಲಿಕಾಹಬ್ಬದ ತರಗತಿಗಳನ್ನು ವಿಶೇಷ ರೀ ತಿಯಲ್ಲಿ ಸಿದ್ಧಪಡಿಸಿದ್ದು, ವಿಟ್ಲ ಕ್ಲಸ್ಟರ್ ವ್ಯಾಪ್ತಿಯ ಸರಕಾರಿ ಶಾಲೆಗಳ ಒಟ್ಟು 125 ಮಕ್ಕಳು ಭಾಗವಹಿಸಿದ್ದು, ಚಟುವಟಿಕೆಯಲ್ಲಿ ಪಾಲ್ಗೊಂಡರು. ಹಾಗೂ ಸೆಲ್ಫಿ ಕಾರ್ನರ್ ನಲ್ಲಿ ಸೆಲ್ಫಿ ಕ್ಲಿಕ್ಕಿಸಲಾಯಿತು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಅನ್ನಪೂರ್ಣ ಸ್ವಾಗತಿಸಿ, ಅರುಣ ವಿ ಧನ್ಯವಾದ ಸಲ್ಲಿಸಿದರು.