ಉಡುಪಿ: ಇತ್ತೀಚೆಗಷ್ಟೇ ರಾಜ್ಯದ ಕುತೂಹಲ ಕೆರಳಿಸಿದ ಉಡುಪಿ ಶಾರದಾ ವಸತಿ ಶಾಲಾ ವಿದ್ಯಾರ್ಥಿನಿ ಇಶಿಕಾ ಶೆಟ್ಟಿ ನಾಪತ್ತೆ ಪ್ರಕರಣದ ಹಿನ್ನೆಲೆ ಇಂದು ಸುದ್ದಿಗಾರರ ಜೊತೆ ಮಾತಾನಾಡಿದ ಸಚಿವ ವಿನಯ್ ಕುಮಾರ್ ಸೊರಕೆ ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈಗಾಗಲೇ ಮಂಗಳೂರು ಪೊಲೀಸರು ಮುಂಬೈಗೆ ತೆರಳಿ ತನಿಖೆ ನಡೆಸುತ್ತಿದ್ದಾರೆ. ಪ್ರಕರಣವನ್ನು ಅತ್ಯಂತ ಶೀಘ್ರದಲ್ಲಿ ಬೇಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಶುಕ್ರವಾರ ಕಾಪುವಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸೊರಕೆ ಈ ವಿಷಯ ತಿಳಿಸಿದರು. ಇದೊಂದು ನಿಗೂಢ ನಾಪತ್ತೆ ಪ್ರಕರಣವಾಗಿದ್ದು ಇಶಿಕಾ ಬರೆದ ಪತ್ರವನ್ನೇ ಆಧಾರವಾಗಿಟ್ಟುಕೊಂಡು ತನಿಖೆ ನಡೆಯುತ್ತಿದೆ.
ಪ್ರಕರಣದಲ್ಲಿ ಮುಂಬೈ ಪೊಲೀಸರ ನೆರವು ಕೋರಲಾಗುವುದ ಎಂದು ತಿಳಿಸಿದರು. ಶಾರಾದಾ ವಸತಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಇಶಿಕಾ ಶೆಟ್ಟಿ ಕಿರುತೆರೆಯ ನಟ ಫೈಝಲ್ ಖಾನ್ ಅಭಿಮಾನಿಯಾಗಿದ್ದು ಆತನನ್ನು ಕಾಣಲೆಂದು ಮುಂಬೈಗೆ ತೆರಳುವುದಾಗಿ ಡೈರಿಯಲ್ಲಿ ಬರೆದಿದ್ದಳು. ಒಂದು ವೇಳೆ ಆತನನ್ನು ಕಾಣಲು ಆಗದೇ ಇದ್ದ ಪಕ್ಷದಲ್ಲಿ ತನ್ನ ಮರಣದ ಸುದ್ದಿಯನ್ನು ಆತನಿಗೆ ತಿಳಿಸಿ ಎಂದು ಬರೆದಿದ್ದಳು ಆದರೆ ಇದುವರೆಗೂ ಆಕೆಯ ಬಗ್ಗೆ ಯಾವುದೇ ರೀತಿಯಾದ ಮಾಹಿತಿಗಳು ಲಭ್ಯವಾಗದೇ ಇರುವುದು ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

