ಮಂಗಳೂರು: ಹೆತ್ತವರ ಜೊತೆ ಸ್ಕೂಟರಿನಲ್ಲಿ ತೆರಳುತ್ತಿದ್ದ ಎಂಟು ವರ್ಷ ಪ್ರಾಯದ ಬಾಲಕಿ ಆಕಸ್ಮಿಕವಾಗಿ ಸ್ಕೂಟರ್ ಸ್ಕಿಡ್ ಆದ ಪರಿಣಾಮ ರಸ್ತೆಗೆಸೆಯಲ್ಪಟ್ಟು ಹಿಂಬದಿಯಿಂದ ಬರುತ್ತಿದ್ದ ಲಾರಿಯಡಿಗೆ ಬಿದ್ದು ದಾರುಣ ಸಾವನ್ನಪ್ಪಿದ ಘಟನೆ ನಗರದ ಬರ್ಕೆ ಠಾಣಾ ವ್ಯಾಪ್ತಿಯ ಅಳಕೆ ಎಂಬಲ್ಲಿ ಆದಿತ್ಯವಾರ ಸಂಜೆ ಸಂಭವಿಸಿದೆ.
ಮೃತ ದುರ್ದೈವಿಯನ್ನು ಮಣ್ಣಗುಡ್ಡ ನಿವಾಸಿ ರಮಾನಂದ ಪೈ ಎಂಬವರ ಪುತ್ರಿ ರಚನಾ ಪೈ(8) ಎಂದು ಹೆಸರಿಸಲಾಗಿದೆ. ಈಕೆ ಸ್ಕೂಟರಿನಲ್ಲಿ ಚಲಿಸುತ್ತಿದ್ದಾಗ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ತಾಯಿಯ ತೊಡೆಯ ಮೇಲೆ ಕುಳಿತಿದ್ದ ಈಕೆ ಹಾರಿ ರಸ್ತೆಗೆಸೆಯಲ್ಪಟ್ಟಿದ್ದು, ಲಾರಿ ಚಾಲಕ ಇದನ್ನು ಗಮನಿಸದೆ ಲಾರಿಯನ್ನು ಚಲಾಯಿಸಿದ್ದರಿಂದ ರಚನಾ ಗಂಭೀರ ಗಾಯಗೊಂಡಿದ್ದಳು.
ಖಾಸಗಿ ಆಸ್ಪತ್ರೆಗೆ ರಚನಾಳನ್ನು ದಾಖಲು ಮಾಡಿದರೂ ಪ್ರಾಣ ಉಳಿಸಲಾಗಲಿಲ್ಲ. ಬರ್ಕೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

