ಕೈಕಂಬ :ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.14ರಂದು ಮಕ್ಕಳ ದಿನಾಚರಣೆ ನಡೆಯಿತು . ಶಾಲೆಯ ಸಂಚಾಲಕ ಜೆ.ಬಿ ಸಿಕ್ವೇರಾ ಅವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ಹಾರೈಸಿದರು.
ಶಿಕ್ಷಕ ರಕ್ಷಕ ಸಂಘದ ಸುದೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಮಹೇಶ್ ಶೆಟ್ಟಿ, ಸಹ ಶಿಕ್ಷಕಿಯರಾದ ಸ್ವರ್ಣಲತಾ, ಐರಿನ್ ಸಾಂತು ಮಯೂರ್, ಭದ್ರತಾಧಿಕಾರಿ ರತ್ನಕಾರ ಕೋಟ್ಯಾನ್, ವಿದ್ಯಾರ್ಥಿ ನಾಯಕಿ ಫಾತಿಮಾ ನಾಶಿಯ ಉಪಸ್ಥಿತರಿದ್ದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಛದ್ಮ ವೇಶ ಸ್ಪರ್ಧೆ ನಡೆಯಿತು. ಶಿಕ್ಷಕ ವರ್ನೆನ್ ಕಾರ್ಯಕ್ರಮ ನಿರೂಪಿಸಿದರು.

