ಮುಂಬಯಿ: ಕಳೆದ ರಾತ್ರಿ ಫರಂಗಿಪೇಟೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರು ತಡೆದು ತಲವಾರು ಹಿಡಿದು ಜೀವ ಬೆದರಿಕೆವೊಡ್ಡಿ ನಡೆಸಲ್ಪಟ್ಟ ಘಟನೆಯು ನಿಜಕ್ಕೂ ಖಂಡನೀಯ ಎಂದು ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಎಸ್.ಶೆಟ್ಟಿ ಪಣಕಜೆ ತಿಳಿಸಿದ್ದಾರೆ.

ನಮ್ಮ ಪರಮಾಪ್ತರೂ, ಬಿಜೆಪಿ ಶಾಶಕರೂ ಆದ ಹರೀಶ್ ಪೂಂಜಾ ಅವರ ಮೇಲಿನ ಹಲ್ಲೆ, ಹತ್ಯೆಯತ್ನ ಅಖಾಂಡ ಸಮಾಜವೇ ತಲೆ ತಗ್ಗಿಸುವಂತಹದ್ದು. ಜೀವ ಬೆದರಿಕೆಗೈದ ಅಪರಿಚಿತ ವ್ಯಕ್ತಿಯ ಬಂಧನ ಶೀಘ್ರವಾಗಿ ನಡೆಸಿ ಸೂಕ್ತ ಶಿಕ್ಷೆ ಒದಗಿಸುವಲ್ಲಿ ಕರ್ನಾಟಕ ಪೋಲಿಸು ಇಲಾಖೆ ಕಾರ್ಯಪ್ರವೃತ್ತವಾಗಬೇಕು.

ಕ್ಷೇತ್ರವೊಂದರ ಪ್ರಭಾವೀ ಶಾಸಕರ ಕಾರನ್ನೇ ಅಡ್ಡಗಟ್ಟಿ ಆಯುಧವನ್ನು ತೋರಿಸಿ ಜೀವ ಬೆದರಿಕೆವೊಡ್ಡಿ ಹತ್ಯೆಗೆ ಪ್ರಯತ್ನಿಸುವ ಮಟ್ಟಕ್ಕೆ ಇಳಿಯುವ ವ್ಯಕ್ತಿ, ಸಂಘಟಕರ ಮೇಲೆ ಇಲಾಖೆಯು ತೀವ್ರ ಕಾರ್ಯಾಚರಣೆ ನಡೆಸಿ ಸಮಾಜದಲ್ಲಿ ಆಶಾಂತಿಯ ವಾತಾವರಣ ಸೃಷ್ಟಿಸುವ ದೇಶದ್ರೋಹಿಗಳಿಗೆ ತಕ್ಕ ಪಾಠವನ್ನು ಕಲಿಸುವ ಅಗತ್ಯವಿದೆ ಎಂದು ವಿಜಯ್ ಶೆಟ್ಟಿ ಪಣಕಜೆ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *