ಬಂಟ್ವಾಳ: ಕನರ್ಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಬಂಟ್ವಾಳ ಮುಸ್ಲಿಂ ವೆಲ್ಫೇರ್ ಎಸೋಸಿಯೇಶನ್ ವತಿಯಿಂದ ಇದೇ 23ರಂದು ಬಂಟ್ವಾಳ ಎಸ್ಡಿಎಂ ಸಭಾಂಗನದಲ್ಲಿ ‘ಬ್ಯಾರಿ ಸಾಹಿತ್ಯ-ಸಾಂಸ್ಕೃತಿಕ ಮೇಳ’ ಕಾತರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬ್ಯಾರಿ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲ್, ಕವಿ ಮುಹಮ್ಮದ್ ಬಡ್ಡೂರು,
ಅಶ್ರಫ್ ಅಪೋಲೋ ಕಲ್ಲಡ್ಕ, ರಹೀಂ ಬಿ.ಸಿ.ರೋಡು, ಶಿಕ್ಷಕ ರಮೇಶ್ ನಾಯಕ್, ಬಿ.ಎಚ್. ಖಾದರ್, ಅಬ್ದುಲ್ ರಝಾಕ್ ಅನಂತಾಡಿ, ಡಾ. ಇಸ್ಮಾಯಿಲ್, ಡಾ. ಸಂಶುದ್ದೀನ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಸಮಿತಿ ಸಂಚಾಲಕ ಹಮೀದ್ ಗೋಳ್ತಮಜಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
