ಸುದ್ದಿ9ಕೈಕಂಬ: ಗುರುಪುರ ಕೈಕಂಬ ಸ್ಪಂದನ ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ನೇಸರ ಕೇಂದ್ರೀಯ ಸಮನ್ವಯ ಸಮಿತಿ ಇದರ ಜಂಟಿ ಆಶ್ರ್ರಯದಲ್ಲಿ ಮಹಿಳಾ ಸಬಲೀಕರಣ ಮತ್ತು ಸ್ವಚ್ಚ ಪರಿಸರ ಜಾಗೃತಿಗಾಗಿ ಸ್ವ ಸಹಾಯ ಸಂಘಗಳ ಸದಸ್ಯರ ಸಮಾವೇಶವು ನ. 18ರಂದು ಮಂಗಳವಾರ 10-30ಕ್ಕೆ ಗುರುಪುರ ಕೈಕಂಬದ ಪ್ರೀಮಿಯರ್ ಹಾಲ್ ನಲ್ಲಿ ಜರಗಲಿದೆ.

ಅಧ್ಯಕ್ಷತೆಯನ್ನು ಸ್ಪಂದನ ಸ್ವಸಹಾಯ ಸಂಘಗಳ ಅಧ್ಯಕ್ಷೆ ಅನುಸೂಯ ಕಾಜವ ವಹಿಸಲಿದ್ದಾರೆ. ಇದರ ಉದ್ಘಾಟನೆಯನ್ನು ದ.ಕ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಗಟ್ರೋಡ್ ವೇಗಸ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅಥಿತಿಗಳಾಗಿ ಮಂಗಳೂರು ತಾಲೂಕಿನ ಮಹಿಳಾ ಮಂಡಲಗಳ ಗೌರವ ಅಧ್ಯಕ್ಷೆ ಕೆ.ಎ ರೋಹಿಣಿ ,ದಿಶಾ ಟ್ರಸ್ಟ್ ಅಧ್ಯಕ್ಷೆ ಐರಿನ್ ವೇಗಸ್,ದಿಶಾ ಟ್ರಸ್ಟ್ ಕಾರ್ಯದರ್ಶಿ ಡಾ.ಮಹಮ್ಮದ್ ಗುತ್ತಿಗಾರ್ , ನೋಬರ್ಟ್ ಸಿಕ್ವೇರಾ ಭಾಗವಹಿಸಲಿದ್ದಾರೆ. ಎಂದು ದಿಶಾ ಟ್ರಸ್ಟ್ನ ಪ್ರಕಟನೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *