ಆನೆಕಲ್: ಇಲ್ಲಿನ ಕುರುಡಪದವು ಸರಕಾರಿ ಶಾಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ದಿ. ವಿಕ್ಟರ್ ಡಿಸೋಜ ಸ್ಮರಣಾರ್ಥ ವಿಜೃಂಭಣೆಯ ಅದ್ದೂರಿ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ತೌಡುಗೋಳಿಯ ಯುವಕ ಮಂಡಲ ನರಿಂಗಾನ ತಂಡ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು ವಿವೇಕಾನಂದ ಬಾಯಾರು ತಂಡ ರನ್ನರ್ಸ್ ಗೆ ಪ್ರಾಪ್ತವಾಯಿತು.

ಫೈನಲ್ ನಲ್ಲಿ ಯುವಕ ಮಂಡಲ ನರಿಂಗಾನ ತಂಡ ಹಾಗೂ ವಿವೇಕಾನಂದ ಬಾಯಾರು ತಂಡಗಳ ನಡುವಿನ ಜಿದ್ದಾಜಿದ್ದಿನ ಹೋರಾಟದಲ್ಲಿ ನರಿಂಗಾನ ಯುವಕ ಮಂಡಲ 2-1ರ ಮೂಲಕ ಗೆಲುವು ದಾಖಲಿಸಿತು. ಇದಕ್ಕೂ ಮುನ್ನ ಸೆಮಿಫೈನಲ್ ನಲ್ಲಿ ಯುವಕ ಮಂಡಲ ನರಿಂಗಾನ ತಂಡ ಡೇಂಜರ್ ಬಾಯ್ಸ್ ತಂಡವನ್ನು ಹಾಗೂ ವಿವೇಕಾನಂದ ಬಾಯಾರು ತಂಡ ಮಹಾಕಾಳಿ ಎಕ್ಕೂರು ತಂಡವನ್ನು ಸೋಲಿಸಿ ಫೈನಲ್ ಗೆ ಪ್ರವೇಶಿಸಿತ್ತು.

ಪಂದ್ಯಾಟದುದ್ದಕ್ಕೂ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ಆಟಗಾರರಿಂದ ನೆರೆದಿದ್ದ ಕ್ರೀಡಾಭಿಮಾನಿಗಳ ಉಸಿರು ಬಿಗಿಹಿಡಿದು ನೋಡುವಂತಹ ರೋಮಾಂಚನಕಾರಿ ಪ್ರದರ್ಶನವಾಗಿತ್ತಲ್ಲದೆ ಪ್ರತಿ ಪಂದ್ಯದಲ್ಲೂ ಇತ್ತಂಡಗಳಿಂದಲೂ ಫಂದ್ಯದ ಗತಿ ಏರುಪೇರು ಮಾಡಿದಂತಹ ಫಲಿತಾಂಶ ದಾಖಲಾಯಿತು.

ಸಮಾರೋಪದಲ್ಲಿ ಯುವಕ ಮಂಡಲ ನರಿಂಗಾನ ತಂಡ ವಿಕ್ಟರ್ ಡಿಸೋಜ ಸ್ಮರಣಾರ್ಥ ಪ್ರಥಮ ಪ್ರಶಸ್ತಿ ಹಾಗೂ ನಗದು 10ಸಾವಿರ ರೂ. ಹಾಗೂ ವಿವೇಕಾನಂದ ಬಾಯಾರು ತಂಡ 5ಸಾವಿರ ರೂ. ನಗದು ಹಾಗೂ ಪ್ರಶಸ್ತಿ ತಮ್ಮದಾಗಿಸಿಕೊಂಡಿತು. ಡೇಂಜರ್ ಬಾಯ್ಸ್ ತೃತೀಯ ಪ್ರಶಸ್ತಿ ಹಾಗೂ ಮಹಾಕಾಳಿ ಎಕ್ಕೂರು ತಂಡ ಚತುರ್ಥ ಪ್ರಶಸ್ತಿ ತಮ್ಮದಾಗಿಸಿಕೊಂಡಿತು.

ನರಿಂಗಾನ ಯುವಕ ಯುವಕ ಮಂಡಲದ ರಾಕಿ ಬೆಸ್ಟ್ ಆಲ್ ರೌಂಡರ್ ಹಾಗೂ ಸುಹೈಲ್ ಬೆಸ್ಟ್ ಪಾಸರ್ ಆಗಿಯೂ ವಿವೇಕಾನಂದ ಬಾಯಾರು ತಂಡದ ಸ್ಯಾಂಡಿ ಅತ್ಯುತ್ತಮ ಹೊಡೆತಗಾರ ಹಾಗೂ ಡೇಂಜರ್ ಬಾಯ್ಸ್ ತಂಡದ ಜೆಸಿಲ್ ಬೆಸ್ಟ್ ಡಿಫೆಂಡರ್ ವೈಯಕ್ತಿಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಕೂಟದಲ್ಲಿ 32ತಂಡಗಳು ಭಾಗವಹಿಸಿದ್ದು ಕನಿಷ್ಢ ಹತ್ತು ಬಲಿಷ್ಠ ತಂಡಗಳ ನಡುವೆ ಪ್ರತಿಪಂದ್ಯದಲ್ಲೂ ಜಿದ್ದಾಜಿದ್ದಿನ ಸಮಬಲದ ಸೆಣಸಾಟ ಕೂಟವನ್ನು ಸ್ಮರಣೀಯವಾಗಿಸಿತು.
ಸಮಾರೋಪದಲ್ಲಿ ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ, ನರಿಂಗಾನ ಯುವಕ ಮಂಡಲದ ಅಧ್ಯಕ್ಷ ಜೀತೇಶ್ ಶೆಟ್ಟಿ ಪೂಂಜರ ಮನೆ, ಪ್ರಧಾನ ಕಾರ್ಯದರ್ಶಿ ಪುನೀತ್ ಶೆಟ್ಟಿ ಪುಳಿಂಕೆತ್ತಡಿ ಕ್ರೀಡಾ ಕಾರ್ಯದರ್ಶಿ ವಿಜಯ್ ಪೂಜಾರಿ ಆರ್. ಸರ್ಕುಡೇಲು, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಜ್ವಲ್ , ನರಿಂಗಾನ ಯುವಕ ಮಂಡಲದ ಮಾಜಿ ಅಧ್ಯಕ್ಷರುಗಳಾದ ಚಂದ್ರಹಾಸ್ ಎಲ್. ಸರ್ಕುಡೇಲು,
ವಿಜಯ್ ಎಲ್. ಸರ್ಕುಡೇಲು, ಅವಿನಾಶ್ ಸರ್ಕುಡೇಲು,
ನಿಖಿಲ್ ಆಳ್ವ ಗರೋಡಿ, ಇಬ್ರಾಹಿಂ ಶಾಂತಿಪಳಿಕೆ,
ರಾಕೇಶ್ ಕೊರಕಟ್ಟ, ಸತೀಶ್ ಮಲಿ, ಪರಶು ಆಳ್ಬರಬೆಟ್ಟು, ನಿತಿನ್ ನಿಡ್ಮಾಡ್, ಮುರಲೀಧರ ಶೆಟ್ಟಿ ತಿಮರಕೋಡಿ, ಶ್ರೀಕುಮಾರ್ ಸರ್ಕುಡೇಲು, ರಾಜೀವ ಎಸ್. ಶಾಂತಿಪಳಿಕೆ, ಪ್ರದೀಪ್ ಕೋಟ್ಯಾನ್ ಶಾಂತಿಪಳಿಕೆ, ಶ್ರವಣ್ ಸರ್ಕುಡೇಲು, ಕೌಶಿಕ್ ತೌಡುಗೋಳಿ, ಜೀವನ್ ಕಣಂತೂರು ಪಾಲ್ಗೊಂಡಿದ್ದರು.
