ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ನಡೆದ ಆಳ್ವಾಸ್ ನುಡಿಸಿರಿ 2014 ಭಾನುವಾರ ಸಂಜೆ ಸಂಪನ್ನಗೊಂಡಿತು. ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಿದ 11 ಜನ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಆಳ್ವಾಸ್ ನುಡಿಸಿರಿ ಸಮ್ಮೇಳನದ ಸವರ್ಾಧ್ಯಕ್ಷ ನಾಡೋಜ ಡಾ. ಸಿದ್ಧಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕನ್ನಡ ನಾಡು ನುಡಿಗೆ ಸಲ್ಲಿಸಿದ ಅನನ್ಯ ಸೇವೆ ಮತ್ತು ಕೊಡುಗೆಗಾಗಿ ಡಾ. ಸಂಗಮೇಶ ಸವದತ್ತಿಮಠ, ಪ್ರೊ. ವಸಂತ ಕುಷ್ಟಗಿ, ಪ್ರೊ. ಎಚ್. ಎಸ್. ಶಿವಪ್ರಕಾಶ, ಪ್ರೊ. ಷ. ಶೆಟ್ಟರ್, ಡಾ. ಮಾಲತಿ ಪಟ್ಟಣಶೆಟ್ಟಿ, ಶ್ರೀ ಟಿ.ಎಸ್. ನಾಗಾಭರಣ, ಪ್ರೊ. ಹೆರಂಜೆ ಕೃಷ್ಣ ಭಟ್ಟ, ಶ್ರೀ ಮಂಟಪ ಪ್ರಭಾಕರ ಉಪಾಧ್ಯ, ಡಾ. ವಸುಂಧರಾ ದೊರೆಸ್ವಾಮಿ, ಅಶ್ವತ್ಥಪುರ ಬಾಬುರಾಯ ಆಚಾರ್ಯ. ಬಾನಂದೂರು ಕೆಂಪಯ್ಯ ಅವರನ್ನು ಶಾಲು, ಹಾರ, ಸ್ಮರಣಿಕೆ, ಸಮ್ಮಾನಪತ್ರ, ಫಲ ಪುಷ್ಪ ತಲಾ ರೂ ಹತ್ತು ಸಾವಿರ ಗೌರವ ನಗದು ಒಳಗೊಂಡ ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆಳ್ವಾಸ್ ನುಡಿಸಿರಿಯ ಸಂಘಟಕ ಡಾ.ಎಂ. ಮೋಹನ ಆಳ್ವ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಜಾಗತಿಕ ಸವಾಲಿನ ನಡುವೆ ಕನ್ನಡದ ನಾಡು ನುಡಿಗೆ ಎದುರಾಗುವ ಆತಂಕ ತಲ್ಲಣವನ್ನು ಸಜ್ಜನರು ಸೇರಿ ಎದುರಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾಣರ್ಿಕ್ , ಆಳ್ವಾಸ್ನ ಟ್ರಸ್ಟಿಗಳಾಗಿರುವ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು. ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿ ಕಿದಿಯೂರು ವೇಣುಗೋಪಾಲ ಶೆಟ್ಟಿ ವಂದಿಸಿದರು.






