ಮೂಡುಬಿದರೆ: ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ತುಳು ಮಣ್ಣಿನ ವಿಶಿಷ್ಠ ಶಕ್ತಿಯನ್ನು ಬಳಸಿಕೊಂಡು ತುಳುನಾಡು ಸಾಧನೆಯ ಶಿಖರವೇರಿದೆ. ತುಳುವರ ಈ ಶಕ್ತಿಯೇ ಸಂಸ್ಕೃತಿಯ ಬೇರಾಗಿದೆ ಎಂದು ಧರ್ಮಸ್ಥಳದ ಧಮರ್ಾಧಿಕಾರಿ ರಾಜಷರ್ಿ ಡಾ.ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.
ಆಳ್ವಾಸ್ ನುಡಿಸಿರಿ 2014ರ ಅಂಗವಾಗಿ ನಡೆದ `ಆಳ್ವಾಸ್ ತುಳುಸಿರಿ-2014′ ತುಳು ಸಮ್ಮೇಳನಕ್ಕೆ ಶುಕ್ರವಾರ ವಿದ್ಯಾಗಿರಿಯ ರತ್ನಾಕರವಣರ್ಿ ವೇದಿಕೆಯಲ್ಲಿ ಚಾಲನೆ ನೀಡಿ ಮಾತನಾಡಿದರು.
ಬ್ಯಾಂಕಿಂಗ್, ಶಿಕ್ಷಣ ವೈದ್ಯಕೀಯ, ಜಾನಪದ, ಕಲೆ, ಸಂಗೀತ, ಸಾಹಿತ್ಯ ಕ್ಷೇತ್ರಗಳಲ್ಲಿ ತುಳುನಾಡು ತನ್ನದೇ ಆದ ವಿಶಿಷ್ಠ ಛಾಪು ಮೂಡಿಸಿದೆ. ತುಳು ಸಂಸ್ಕೃತಿ ಸಂಸ್ಕಾರ ರಕ್ಷಣೆಯ ಪ್ರಯತ್ನ ಮುಂದುವರಿಯಬೇಕು. ಈ ಮೂಲಕ ನಮ್ಮ ವಿಶಿಷ್ಠ ಸಂಸ್ಕೃತಿಯ ಹೆಜ್ಜೆಯನ್ನು ಎತ್ತಿಹಿಡಿಯುವಂತಾಗಬೇಕು. ಇಲ್ಲಿನ ವೀರತ್ವ, ಆಚಾರವಿಚಾರಗಳು ಮಾಯವಾಗದಂತೆ ಕಾಪಾಡಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಿ, ಸರ್ವರ ಸಹಕಾರದಿಂದ ತುಳು ಭಾಷೆ ಅಭಿವೃದ್ಧಿಯಾಗಿದೆ. ನಮ್ಮ ಸಂಸ್ಕೃತಿ, ಆಚರಣೆಗಳನ್ನು ಉಳಿಸಿಕೊಳ್ಳುವಲ್ಲಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದರು.
ಹಿರಿಯ ಸಂಶೋಧಕ ಡಾ.ಬಿ.ಎ.ವಿವೇಕ ರೈ ಆಶಯ ಭಾಷಣ ಹಾಗೂ ಜಾನಪದ ವಿದ್ವಾಂಸ ಡಾ.ಗಣೇಶ ಅಮೀನ್ ಸಂಕಮಾರ್ ದಿಕ್ಸೂಚಿ ಭಾಷಣ ಮಾಡಿದರು.
ಸಚಿವರಾದ ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ವಿಧಾನಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾಣರ್ಿಕ್, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಮೂಡುಬಿದರೆ ಪುರಸಭಾಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ, ಪುತ್ತಿಗೆ ಗ್ರಾ.ಪಂ ಅಧ್ಯಕ್ಷ ಉಮಾನಾಥ ಕಕರ್ೇರಾ, ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಸಾಹಿತಿ ಅಂಬಾತನಯ ಮುದ್ರಾಡಿ, ಪ್ರಾಧ್ಯಾಪಕ ಡಾ. ಅಭಯಕುಮಾರ್, ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಕೆ.ಸೀತಾರಾಮ ಕುಲಾಲ್, ತುಳು ಕೂಟ ಬೆದ್ರದ ಅಧ್ಯಕ್ಷ ಸುಭಾಶ್ಚಂದ್ರ ಪಡಿವಾಳ್, ರಾಮಚಂದ್ರ ಮಿಜಾರು, ಪ್ರದೀಪ್ ಗಾಣಿಗ, ಸರಪಾಡಿ ದೇಜಪ್ಪ ಪರವ, ಎಂ.ಡಿ.ವೆಂಕಪ್ಪ, ಭಾಸ್ಕರ ಬಂಗೇರ, ಮತ್ತಾಡಿ ಕಾಯರ್ ಪಲ್ಕೆ, ಸಂಜೀವ ಮಲೆಕುಡಿಯ ಮುಖ್ಯ ಅತಿಥಿಗಳಾಗಿದ್ದರು. ಕನರ್ಾಟಕ ತುಳು ಅಕಾಡೆಮಿಯ ಸಹಕಾರದೊಂದಿಗೆ ತುಳುಸಿರಿ ಕಾರ್ಯಕ್ರಮ ನಡೆಯಿತು.
ತುಳುಸಿರಿ ಸಮ್ಮಾನ: ಹಿರಿಯ ತುಳು ಸಾಹಿತಿ, ವಿದ್ವಾಂಸ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್, ಸಂಶೋಧಕ ಡಾ.ವಾಮನ ನಂದಾವರ, ತುಳು ಸಾಹಿತಿ ಬೋಳ ಚಿತ್ತರಂಜನ್ ದಾಸ್ ಶೆಟ್ಟಿ, ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ, ಕೊರಪ್ಪೊಳು ನಾರಜೆ, ತುಳು ರಂಗಭೂಮಿ ಕಲಾವಿದ ವಿ.ಜಿ.ಪಾಲ್, ದೇವನರ್ತಕರಾದ ಉಮೇಶ ಪಂಬದ, ಶಿವಪ್ಪ ನಲಿಕೆ ಮತ್ತು ಗಂಗಯ್ಯ ಪರವ, ತುಳು ಸಾಹಿತಿ ಜಯಂತಿ ಎಸ್. ಬಂಗೇರ ಹಾಗೂ ತುಳು ಹಾಸ್ಯ ಕಲಾವಿದ ದೇವದಾಸ್ ಕಾಪಿಕಾಡ್ ಅವರಿಗೆ ಪ್ರಸಕ್ತ ವರ್ಷದ ತುಳುಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತುಳು ಸಂಸ್ಕೃತಿ ಅನಾವರಣ:
ತುಳು ಸಂಸ್ಕೃತಿಯ ಅಪೂರ್ವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ವಿರಳಾತಿ ವಿರಳ ಜಾನಪದ ನೃತ್ಯಗಳಾದ ಪಾರ್ದನ ಮೇಳ, ಪುರುಸೆರ್, ದಾರಿನ, ಮಾರಿಭೂತ ಮೊದಲಾದ ವಿಶಿಷ್ಟ ಕಾರ್ಯಕ್ರಮ ತುಳುವರಲ್ಲದೆ ಹೊರ ಜಿಲ್ಲೆಗಳಿಂದ ಬಂದ ಕನ್ನಡಿಗರನ್ನು ಸೆಳೆಯಿತು.
………………..
ತುಳು ನಮ್ಮ ಹೃದಯದಲ್ಲಿದೆ. ಆದರೆ ಸಾಂಪ್ರದಾಯಿಕವೂ ಅಲ್ಲದ, ಅಧುನೀಕರಣವೂ ಅಲ್ಲದ ಸಮಾನ ಸಂಸ್ಕೃತಿಯೊಂದಿಗೆ ನಾವು ಬದುಕುತ್ತಿದ್ದೇವೆ.
– ಡಾ.ಡಿ. ವೀರೇಂದ್ರ ಹೆಗ್ಗಡೆ











