ಸುದ್ದಿ9ಮೂಡುಬಿದರೆ: ಜೈನ ಬಾಂಧವರಿಗಾಗಿ ಮೂಡುಬಿದರೆ ತ್ರಿಭುವನ್ ಯುವ ಜೈನ್ ಮಿಲನ್ ಹಮ್ಮಿಕೊಂಡ ತ್ರಿಭುವನ್ ಯುವಜನೋತ್ಸವ 2014 ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ದೆಗಳಿಗೆ ಭಾನುವಾರ ಚಾಲನೆ ನೀಡಲಾಯಿತು.
ಯುವಜನಸೇವೆ ಸಚಿವ ಅಭಯಚಂದ್ರ ಜೈನ್ ಸ್ಪರ್ದೆಗಳಿಗೆ ಚಾಲನೆ ನೀಡುತ್ತಾ, ಯುವಕರು ಶೈಕ್ಷಣಿಕ, ವ್ಯಾವಹರಿಕವಾಗಿ ಸಾಧನೆ ಮಾಡಬೇಕು. ಇದರೊಂದಿಗೆ ಧಾರ್ಮಿಕವಾಗಿಯೂ ಮುನ್ನಡೆಯಬೇಕೆಂದರು.
ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಆಶೀವರ್ಚನ ನೀಡುತ್ತಾ, ಯುವಜನತೆ ದೇಶದ ಸಂಪತ್ತು. ಅವರಲ್ಲಿರುವ ಸೇವಾ ಮನೋಭಾವನೆ, ಪ್ರತಿಭೆಯನ್ನು ಗುರುತಿಸಿ ಸಮಾಜದ ಏಳಿಗೆಗೆ ಪೂರಕವಾಗುವಂತೆ ಮಾಡುವುದು ಅವಶ್ಯಕ. ಸಾಮಾಜಿಕ ಪಿಡುಗು, ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯುವಕರಿಗೆ ಸಾಧ್ಯ ಎಂದರು.
ಮಂಗಳೂರು ವಿವಿ ನಡೆಸಿದ ಬಿಪಿಎಡ್ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ವಿಜೇತ್ ಕುಮಾರ್ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ತ್ರಿಭುವನ್ ಯುವ ಜೈನ್ಮಿಲನ್ ಅಧ್ಯಕ್ಷ ನಾಗವರ್ಮ ಜೈನ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ. ಪಿ. ಜಗದೀಶ ಅಧಿಕಾರಿ, ಜೈನ್ಮಿಲನ್ ವಲಯ 8ರ ಕಾರ್ಯದರ್ಶಿ ಪುಷ್ಪರಾಜ್ ಜೈನ್, ಚೌಟರ ಅರಮನೆಯ ಕುಲದೀಪ್ ಎಂ, ಧವಲಾ ಕಾಲೇಜಿನ ಪ್ರಾಂಶುಪಾಲ ಎಂ. ರವೀಶ್ ಕುಮಾರ್, ಜೈನ್ಮಿಲನ್ ವಲಯ ನಿರ್ದೆಶಕ ಮಾಣಿಕ್ಯರಾಜ್ ಅಜ್ರಿ, ಯುವಜೈನ್ ಮಿಲನ್ ವಲಯ 8ರ ನಿರ್ದೆಶಕ ಜಿತೇಶ್, ಮೂಡುಬಿದರೆ ಜೈನ್ ಮಿಲನ್ ಅಧ್ಯಕ್ಷ ನಿರಂಜನ್ ಶೆಟ್ಟಿ, ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್ ಮುಖ್ಯ ಅತಿಥಿಗಳಾಗಿದ್ದರು. ಅಶೋಕ್ ಕುಮಾರ್ ಜೈನ್ ಸ್ವಾಗತಿಸಿದರು. ಧೀರೇಂದ್ರ ಬಲ್ಲಾಳ್ ವಂದಿಸಿದರು. ನಿತೇಶ್ ಬಲ್ಲಾಳ್ ಕಾರ್ಯಕ್ರಮ ನಿರ್ವಹಿಸಿದರು. ನೃತ್ಯ ಸ್ಪಧರ್ೆ, ಕಿನ್ನಿಮದ್ಮಲ್, ಜಿನಭಕ್ತಿಗೀತೆ, ಭಾಷಣ ಸ್ಪರ್ದೆ, ರಸಪ್ರಶ್ನೆ ಸ್ಪರ್ದೆಗಳು ನಡೆದವು.

mbd_nov30_1

By suddi9

Leave a Reply

Your email address will not be published. Required fields are marked *