ಉಡುಪಿ: ಸರಕಾರಿ ಸಂಯುಕ್ತ ಪ್ರೌಢಶಾಲೆ ಶೆಟ್ಟಿಬೆಟ್ಟುವಿನಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕ ಮತ್ತು ಬಳಕೆದಾರರ ಸಂಘದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಜೂನಿಯರ್ ರೆಡ್ ಕ್ರಾಸ್ ಸಂಘದ ಉದ್ಘಾಟಕರಾಗಿ ಶ್ರೀಮತಿ ಪದ್ಮಾ ಕಿಣಿ,ನಿರ್ದೇಶಕರು ಜೂನಿಯರ್ ರೆಡ್ ಕ್ರಾಸ್ ಘಟಕ ಉಡುಪಿ ಜಿಲ್ಲೆ ಇವರು ಆಗಮಿಸಿ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.ಬಳಕೆದಾರರ ವೇದಿಕೆ ಪರ್ಕಳ ಘಟಕದ ಅಧ್ಯಕ್ಷರಾದ ಶ್ರೀ ಅಬೂಬಕ್ಕರ್ ಅವರು ವಿದ್ಯಾರ್ಥಿಗಳಿಗೆ ಗ್ರಾಹಕರ ಹಕ್ಕುಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.

ಮತದಾರರ ಸಾಕ್ಷರತಾ ಕ್ಲಬ್ ನ ಶಾಲಾ ರಾಯಭಾರಿ ಹಾಗೂ ಹಾಗೂ ನ್ಯಾಯವಾದಿಗಳು ಆಗಿರುವ ಶ್ರೀ ಭಾರತೀಶ್ ಉಪಾಧ್ಯ ಅವರು ಪ್ರಸ್ತುತ ದಿನಗಳಲ್ಲಿ ಕೇವಲ ಗ್ರಾಹಕ ಮಾತ್ರವೇ ಎಚ್ಚರದಿಂದ ಇದ್ದರೆ ಸಾಲದು ಮಾರಾಟಗಾರರು ಕೂಡ ಗ್ರಾಹಕರಿಗೆ ಅನ್ಯಾಯ ಅಥವಾ ಮೋಸವಾಗದಂತೆ ಹಿತಕಾಯುವ ನೆಲೆಯಲ್ಲಿ ಎಚ್ಚರವಹಿಸಬೇಕಾದ ಅಗತ್ಯತೆಯನ್ನು ಪ್ರತಿಪಾದಿಸಿದರು ಮತ್ತು ಗ್ರಾಹಕರ ರಕ್ಷಣೆ ರೂಪಿತವಾಗಿರುವ ಕಾನೂನುಗಳನ್ನು ಪರಿಚಯಿಸಿದರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎಸ್ಡಿಎಂಸಿ ಉಪಾಧ್ಯಕ್ಷರಾದ ಶ್ರೀ ರಾಮದಾಸ್ ನಾಯಕ್ ಗೌರವ ಶಿಕ್ಷಕರಾದ ಶ್ರೀ ನರಸಿಂಹ ನಾಯಕ್ ಉಪಸ್ಥಿತರಿದ್ದರು.

ನಮ್ಮ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶ್ರೀದೇವಿ ಬಾಯಿ ಇವರು ಅಧ್ಯಕ್ಷತೆ ವಹಿಸಿದ್ದರು ಸಮಾಜಶಾಸ್ತ್ರ ಶಿಕ್ಷಕರಾದ ಹಾಗೂ ಎರಡು ಕ್ಲಬ್ಬುಗಳ ಮಾರ್ಗದರ್ಶಿ ಶಿಕ್ಷಕರಾದ ಶ್ರೀ ಅಮೃತರಾಜ್ ಅವರು ನಿರ್ವಹಿಸಿದ ಕಾರ್ಯಕ್ರಮದಲ್ಲಿ ಸಂಸ್ಥೆಯ ಗಣಿತ ಶಿಕ್ಷಕರಾದ ಶ್ರೀ ಸಂದೀಪ್ ಅತಿಥಿಗಳನ್ನು ಸ್ವಾಗತಿಸಿದರು ಶಿಕ್ಷಕಿಯರಾದ ಶ್ರೀಮತಿ ಮಾಲತಿ ಇವರು ಜೂನಿಯರ್ ರೆಡ್ ಕ್ರಾಸ್ ಘಟಕದ ಬಗ್ಗೆ ಹಾಗೂ ಶ್ರೀಮತಿ ಶುಭಲತಾ ಇವರು ಬಳಕೆದಾರರ ಸಂಘದ ಬಗ್ಗೆ ಪ್ರಾಸ್ತಾವಿಕ ನುಡಿ ನುಡಿದರು ಶಿಕ್ಷಕರಾದ ಶ್ರೀ ವೆಂಕಟೇಶ್ ಧನ್ಯವಾದ ಸಮರ್ಪಿಸಿದರು.

By Suddi9

Leave a Reply

Your email address will not be published. Required fields are marked *