ವಿದ್ಯಾಗಿರಿ: ಮೂಡಬಿದ್ರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಕಾಲೇಜ್ ಪ್ರಾಂಗಣದಲ್ಲಿ ಮೂರು ದಿನಗಳ ನಾಡುನುಡಿಯ ಸಮ್ಮೇಳನವಾದ ನುಡಿಸಿರಿ ಆರಂಭಗೊಂಡಿದೆ. ಸಂಭ್ರಮಕ್ಕೆ ಇದೂ ಒಂದು ಕಾರಣವಾದರೆ ಮತ್ತೊಂದೆಡೆ ಇಂದು `ಮಕ್ಕಳ ದಿನಾಚರಣೆ’.
ಆಳ್ವಾಸ್ ನುಡಿಸಿರಿಯ ಸಂಭ್ರಮವನ್ನು ಸವಿಯಲೆಂದು ರಾಜ್ಯ-ಹೊರರಾಜ್ಯಗಳ ನೂರಾರು ಕನ್ನಡ ಪ್ರೇಮಿಗಳು ಬರುತ್ತಾರೆ. ಅಲ್ಲದೆ ನುಡಿಸಿರಿಗೆ ಜನರನ್ನು ಆಕಷರ್ಿಸುವ ಶಕ್ತಿಯನ್ನೂ ಹೊಂದಿದೆ. ಈ ನಡುವೆ ಆಳ್ವಾಸ್ ಕಾಲೇಜ್ನ ಮುಂಭಾಗ ಒಂದು ರೋಗಗ್ರಸ್ಥ ಕುಟುಂಬವೊಂದು ಸ್ವಾಗತ ನೀಡುತ್ತದೆ. ತೊನ್ನು ರೋಗದಿಂದ ಬಳಲುತ್ತಿರುವ ಈ ಕುಟಂಬ ಮಣಿಪುರದಿಂದ ಬಂದಿದೆ ಎನ್ನಲಾಗುತ್ತಿದೆ. ಸಣ್ಣ ಸಣ್ಣ ಮಕ್ಕಳೊಂದಿಗೆ ಬಂದಿರುವ ಈ ಕುಟುಂಬ ಕನ್ನಡಾಸಕ್ತರಲ್ಲಿ ಭಿಕ್ಷೆಯನ್ನು ಬೇಡುತ್ತಿದೆ.

tonnuroga (1)

tonnuroga (2)

tonnuroga (3)

tonnuroga (4)

tonnuroga (5)
ಮಣಿಪುರದಿಂದ ನೇರವಾಗಿ ರೈಲು ಹತ್ತು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ಈ ಕಟುಂಬ ಅದು ಹೇಗೋ ಆಳ್ವಾಸ್ ನುಡಿಸಿರಿಗೆ ಬಂದಾಗಮಿಸಿದೆ. ಆಳ್ವಾಸ್ ಕಾಲೇಜ್ ಸಮೀಪವೇ ಭಿಕ್ಷೆ ಬೇಡುತ್ತಿರುವ ಈ ಕುಟುಂಬ ತನ್ನ ಪುಟ್ಟ ಮಕ್ಕಳೊಂದಿಗೆ ಕಾಣುತ್ತಿರುವುದು ಮಕ್ಕಳ ದಿನಾಚರಣೆಯ ದಿನ ಕನ್ನಡಾಸಕ್ತರನ್ನು ಸ್ವಾಗತಿಸುವುದು ಮರುಕ ಹುಟ್ಟುತ್ತದೆ.
ಕನ್ನಡ ನುಡಿಸಿರಿಗೆ ಎಷ್ಟೊಂದು ಶಕ್ತಿ ಇದೆ ಎಂದರೆ ಅದಕ್ಕೆ ಪ್ರಚಾರದ ಹಂಗೇ ಬೇಕ್ಕಿಲ್ಲ. ಯಾಕೆಂದರೆ ಮಣಿಪುರಿಂದ ಬಂದಿರುವ ಈ ಕುಟುಂಬಕ್ಕೆ ಮೂಡಬಿದ್ರೆಯಲ್ಲಿ ನುಡಿಸಿರಿ ಇದೆ ಎಂದು ಯಾರು ಹೇಳಿದ್ದರೆಂಬುದೇ ಪ್ರಶ್ನೆ ಬೃಹದಾಕಾರವಾಗಿ ಕೊರೆಯುತ್ತದೆ. ಈ ಬಗ್ಗೆ ಕೇಳಿದರೆ ಕುಟುಂಬ ಆಕಾಶ ತೋರಿಸುತ್ತದೆ. ಯಾವುದೋ ಅತೀಂದ್ರಿಯ ಶಕ್ತಿಯಿಂದ ಬಂದಿರುವಂತೆ ಕಾಣುತ್ತಿದೆ.
ಈ ರೋಗವನ್ನು ತೊನ್ನು ರೋಗೆನ್ನುತ್ತಾರೆ. ದೇಹ ಬಿಳಿಯಾಗುತ್ತಾ ಬಂದು, ಮೈಯೆಲ್ಲಾ ಬೆಂಕಿಯಿಟ್ಟಂತೆ ಉರಿಯುತ್ತದೆ. ಕೆಲವೊಮ್ಮೆ ತುರಿಸಲು ಆರಂಭವಾಗುತ್ತದೆ. ಕಣ್ಣನ್ನು ತೆರೆಯಲೂ ಸಾಧ್ಯವಾಗದೆ ಅದನ್ನು ಮುಚ್ಚೋಣ ಎಂದೆನಿಸುತ್ತದೆ. ಒಟ್ಟಿನಲ್ಲಿ ಈ ಕುಟುಂಬ ಸತ್ತುಬದುಕ್ಕುತ್ತಿದೆ ಎಂದೇ ಹೇಳಬಹುದು.
ಈ ಕುಟುಂಬಕ್ಕೆ ಈ ಮೊದಲು ಯಾವುದೇ ರೋಗವಿರಲಿಲ್ಲ. ವಂಶವಾಹಿನಿಯ ಪ್ರಭಾವದಿಂದಲೋ ಅಥವಾ ಯಾವುದೋ ತೊಂದರೆಯಿಂದಲೋ ಈ ರೋಗ ಆವರಿಸಲಾರಂಭಿಸಿತು. ಆಮೇಲೆ ತನಗೆ ಹುಟ್ಟಿದ ಮಕ್ಕಳು ಕೂಡಾ ಇದೇ ರೋಗದಿಂದ ಬಳಳುತ್ತಿದ್ದಾರೆ.
ಈ ರೋಗವನ್ನು ಹೋಗಲಾಡಿಸಲು ಔಷಧದ ಅವಶ್ಯಕತೆ ಇದೆ. ಅಲ್ಲದೆ ತುತ್ತಿನ ಚೀಲವೂ ತುಂಬಬೇಕಿದೆ. ಯಾವುದೇ ಅದಮ್ಯ ಆಸೆಯಿಂದ ಮೂಡಬಿದ್ರೆಯ ಜನತೆ ಒಂದಷ್ಟು ಭಿಕ್ಷೆ ಹಾಕಬಹುದು ಎಂಬ ಆಸೆಯಿಂದ ಈ ಕುಟುಂಬ ಬಂದಿದೆ. ಕೆಲವರು ಅನುಕಂಪದಿಂದ ಒಂದೋ, ಎರಡೋ ಮುಖಬೆಲೆಯ ಕಾಯಿನನ್ನು ಎಸೆದರೆ ಇನ್ನು ಕೆಲವರು ಅತ್ತ ಕಣ್ಣೂ ಹೊರಳಿಸದೆ ಹೋಗುತ್ತಿದೆ.
ಮಕ್ಕಳ ದಿನಾಚರಣೆಯ ಅಂಗವಾಗಿ ಪುಟ್ಟ ಮಕ್ಕಳು ಕಣ್ಣನ್ನೂ ತೆರೆಯಲಾಗದೆ ಬಹಿರಂಗವಾಗಿ ಭಿಕ್ಷೆ ಬೇಡುತ್ತಿರುವ ಈ ದೀನ ಸ್ಥಿತಿಯನ್ನು ಕಂಡು ಎಂಥವರಿಗೂ ಕಣ್ಣೀರು ಬರುತ್ತದೆ. ಕನ್ನಡಾಭಿಮಾನಿಗಳು, ಕನ್ನಡದ ಪೋಷಕರು ಇಂಥಹಾ ಬಡಕಟುಂಬದ ಬಗ್ಗೆ ಕಾಳಜಿ ವಹಿಸಬೇಕೆಂಬ ಸರ್ವತ್ರ ಅಭಿಪ್ರಾಯವೂ ಕೇಳಿಬಂದಿದೆ.

 

 

By suddi9

Leave a Reply

Your email address will not be published. Required fields are marked *