ಕೋಲ್ಕತ್ತಾ: ಜಾನುವಾರು ಅಕ್ರಮ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಿರಿಯ ನಾಯಕ ಅನುಬ್ರತಾ ಮೊಂಡಲ್ಗೆ ಸಿಬಿಐ ಸಮನ್ಸ್ ನೀಡಿದೆ.

ಅನಾರೋಗ್ಯ ಕಾರಣ ನೆಪ ಹೇಳಿ ಸೋಮವಾರ ಸಿಬಿಐ ಅಧಿಕಾರಿಗಳನ್ನು ಭೇಟಿ ಮಾಡದೆಯೇ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದ ಮೊಂಡಲ್ ಅವರನ್ನು ಬುಧವಾರ ಕೇಂದ್ರ ಏಜೆನ್ಸಿಯ ಅಧಿಕಾರಿಗಳ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ಬೋಲ್ಪುರ್ನಲ್ಲಿರುವ ಮೊಂಡೊಲ್ ನಿವಾಸಕ್ಕೆ ನೋಟಿಸ್ ನೀಡಲು ಸಿಬಿಐ ಅಧಿಕಾರಿಗಳು ಹೋಗಿದ್ದಾರೆ.

