ಮುಂಬೈ:  ದೆಹಲಿ ಕರ್ನಾಟಕ ಸಂಘ ಪ್ರತಿ ವರ್ಷಕರ್ನಾಟಕ  ರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ಕನ್ನಡಕ್ಕಾಗಿ ವಿಶೇಷ ಸೇವೆ ಮಾಡಿದ ಹಿರಿಯ ಕನ್ನಡಿಗರಿಗೆ ವಿಶಿಷ್ಟ ಕನ್ನಡಿಗ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ವರ್ಷದ ಪ್ರಶಸ್ತಿಯನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಖ್ಯಾತ ಚಿತ್ರ ಕಲಾವಿದ ಕೆ.ಆರ್. ಸುಬ್ಬಣ್ಣ ಮತ್ತು ದೆಹಲಿಯ ಹಿರಿಯ ಕನ್ನಡಿಗ ಹಾಗೂ ನಿವೃತ್ತ ದೆಹಲಿಯ ಕರ್ನಾಟಕ  ಮಾಹಿತಿ ಕೇಂದ್ರದ ಉಪ ನಿರ್ನಿದೇಶಕ  ಟಿ.ಎಂ. ಶಿರೂರ್ ಅವರಿಗೆ ನೀಡಲು ಕಾರ್ಯಕಾರಿ ಸಮಿತಿ ನಿರ್ಧರಿಸಿದೆ. ಸುಪ್ರೀಂ ಕೋರ್ಟ್  ನ್ಯಾಯಾಧೀಶರಾದ ಶ್ರೀ ಗೋಪಾಲ ಗೌಡರು ಈ ಪ್ರಶಸ್ತಿಯನ್ನು ಇದೇ ನವೆಂಬರ್ 30ರಂದು ದೆಹಲಿ ಕರ್ನಾಟಕ  ಸಂಘದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಲಿದ್ದಾರೆ.

ಕೆ.ಆರ್. ಸುಬ್ಬಣ್ಣ

subbanna.k.r
ಚಿತ್ರಕಲೆಯಲ್ಲಿ ಅಂತರರಾಷ್ಟ್ರೀಯ ಕಲಾವಿದರಾಗಿರುವ ಕೆ.ಆರ್. ಸುಬ್ಬಣ್ಣ ಅವರು ಜನಿಸಿದ್ದು 1952ರಲ್ಲಿ. ದಾವಣಗೆರೆಯ ಸ್ಕೂಲ್ ಆಫ್ ಆಟರ್್ ಅಂಡ್ ಕ್ರಾಫ್ಟ್ನಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಮತ್ತು ದೆಹಲಿಯ ಕಾಲೇಜ್ ಆಫ್ ಆರ್ಟ್ ನಿಂದ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ದೆಹಲಿಯ ಕನ್ನಡ ಶಾಲೆಯಲ್ಲಿ 1978ರಿಂದ 2012ರವರೆಗೆ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿರುವರು.

ಕಲಾವಿದರಾಗಿ ನಾಡು, ಹೊರನಾಡು ಮಾತ್ರವಲ್ಲದೆ ಇಂಗ್ಲೆಂಡ್, ದಕ್ಷಿಣಕೊರಿಯಾ, ಅಮೇರಿಕ, ಕೆನಡಾ, ಫ್ರಾನ್ಸ್, ಇಟಾಲಿ ಮತ್ತು ಜಪಾನ್ ಮೊದಲಾದ ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಸ್ವೀಡನ್, ಡೆನ್ಮಾಕರ್್, ನೇಪಾಳ ಸೇರಿದಂತೆ ಹಲವು ದೇಶಗಳಲ್ಲಿ  ಕಾರ್ಯಾಗಾರಗಳನ್ನು ನಡೆಸಿರುವ ಇವರು ವಿಶ್ವದಾದ್ಯಂತ ಶಿಷ್ಯರನ್ನು ಹೊಂದಿದ್ದಾರೆ.

ಇಂದಿರಾಗಾಂಧಿ ಕಲಾಕೇಂದ್ರ ಮತ್ತು ದೂರದರ್ಶನ ಇವರ ಸಾಧನೆಯ ಕುರಿತು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ಪ್ರಸಾರ ಮಾಡಿದೆ. ದೇಶ ವಿದೇಶಗಳಲ್ಲಿ ವಿವಿಧ ಕಲಾಕೇಂದ್ರಗಳ ಆಡಳಿತ ಮಂಡಳಿ ಮತ್ತು ಆಯ್ಕೆ ಸಮಿತಿಯ ಸದಸ್ಯರಾಗಿ ದುಡಿದ ಸುಬ್ಬಣ್ಣ ಅವರು ಕೇಂದ್ರ ಲಲಿತಾ ಕಲಾ ಅಕಾಡೆಮಿಯ ಅಧ್ಯಕ್ಷ ಹುದ್ದೆಗೆ ಏರಿದ ಪ್ರಥಮ ಕನ್ನಡಿಗ.

ಅನೇಕ ಪ್ರಶಸ್ತಿ ಪುರಸ್ಕಾರ ಪಡೆದ ಸುಬ್ಬಣ್ಣ ಅವರು ಕನರ್ಾಟಕ ರಾಜ್ಯ ಲಲಿತ ಕಲಾ ಅಕಾಡೆಮಿ, ಕೇಂದ್ರ ಲಲಿತಾ ಕಲಾ ಅಕಾಡೆಮಿಯ ಪ್ರಶಸ್ತಿ ಪಡೆದಿದ್ದಾರೆ. ಫ್ರೆಂಚ್ ಸಕರ್ಾರ ಸ್ಕಾಲರ್ ಶಿಫ್ ಮತ್ತು ಇಂಗ್ಲೆಂಡ್ನ ‘ಚಾಲ್ಸರ್್ ವ್ಯಾಲೇಸ್ ಇಂಡಿಯಾ ಟ್ರಸ್ಟ್’ ಪುರಸ್ಕಾರಗಳು ಅವರಿಗೆ ಸಂದಿದೆ.

 

ಟಿ.ಎಂ. ಶಿರೂರು

Shirur

 

ಧಾರವಾಡ ಜಿಲ್ಲೆಯ ರಾಣಿ ಬೆನ್ನೂರಿನಲ್ಲಿ 1934ರಲ್ಲಿ ಟಿಎಂ. ಶಿರೂರು ಜನಿಸಿದರು. ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ನವದೆಹಲಿಯ ಇಂಡಿಯನ್ ಇನ್ಸಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್ನಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ.

ಆಗಿನ ಮುಂಬಾಯಿ ಸಚಿವಾಲಯದಲ್ಲಿ 1955ರಲ್ಲಿ ವೃತ್ತಿ ಆರಂಭಿಸಿದ ಇವರು ಮುಂಬೈ ಸರಕಾರದ ಮುಖ್ಯಮಂತ್ರಿ ಮೊರಾರ್ಜಿ ದೇಸಾಯಿ ಅವರಿಗೆ ಸಹಾಯಕ ಸಾರ್ವಜನಿಕ ಸಂಪಕರ್ಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಮುಂದೆ  ಕರ್ನಾಟಕ ಕ ಸರಕಾರದ  ಮಾಹಿತಿ ಮತ್ತು ಪ್ರಕಟಣಾಲಯ ವಿಭಾಗದ ಅಧಿಕಾರಿಯಾಗಿ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಸೇವೆ ಸಲ್ಲಿಸಿದರು.

ಗೋವಾದಲ್ಲಿ ಸೇವೆಯಲ್ಲಿದ್ದಾಗ ಗೋವಾ ಕನ್ನಡ ಸಂಘದ ಅಧ್ಯಕ್ಷರಾಗಿ ಐದು ವರ್ಷಗಳ ಕಾಲ ಅಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. 1973ರಲ್ಲಿ ದೆಹಲಿಯ ಕನರ್ಾಟಕ ಮಾಹಿತಿ ಕೇಂದ್ರದ ಉಪ ನಿದರ್ೇಶಕರಾಗಿ ಇವರು ಇಲ್ಲಿ ಚಲನಚಿತ್ರ, ಕಲಾಪ್ರದರ್ಶನ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದರು. 1991ರಲ್ಲಿ ನಿವೃತ್ತಿಯಾಗುವ ಮೊದಲು ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು, ಬಂಗಾರಪ್ಪ ಸೇರಿದಂತೆ 9 ಮಂದಿ ಮುಖ್ಯಮಂತ್ರಿಗಳ ಸಾರ್ವಜನಿಕ ಸಂಪಕರ್ಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಯುರೋಪ್, ಅಮೆರಿಕ, ಸಿಂಗಾಪುರ ಹಾಗೂ ಮಲೇಷಿಯಾ ದೇಶಗಳಿಗೂ ಇವರು ಪ್ರವಾಸ ಮಾಡಿದ್ದಾರೆ. ಹಿಂದೂಸ್ತಾನಿ ಸಂಗೀತ ಪ್ರೇಮಿಯಾಗಿರುವ ಇವರು ನಿವೃತ್ತಿಯ ನಂತರವೂ ಪಂಡಿತ್ ರಾಜ್ಕಿಶೋರ್ ದಲ್ಬೇರ ಅವರಿಂದ ಕೊಳಲು ವಾದನ ಕಲಿಯುತ್ತಿರುವುದು ಇದಕ್ಕೆ ನಿದರ್ಶನ.

By suddi9

Leave a Reply

Your email address will not be published. Required fields are marked *