ಮಂಗಳೂರು: ಕುಡ್ಲಗ್ ಐಶ್ವರ್ಯಾ ರೈ ಬತ್ತಲ್ಗೆ, ಏರ್ಲಾ ಸುದ್ದಿ ಮಲ್ಪೊಚ್ಚಿ…. ಇಂಥದೊಂದು ಡೈಲಾಗ್ ಮಂಗಳೂರಿನಲ್ಲಿ ಕೇಳಿಬಂದಿತ್ತು. ಯಾಕೆಂದರೆ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಇಂದಿಗೂ ಯುವಕರ ಪಾಲಿಗೆ ಆರಾಧ್ಯ ದೈವ. ಒಂದು ವೇಳೆ ಈಕೆ ಮಂಗಳೂರಿಗೆ ಬಂದ ಗುಟ್ಟು ರಟ್ಟಾಗಿ ಬಿಟ್ಟರೆ ಎಲ್ಲಿ ಅಭಿಮಾನಿಗಳು ಬಂದು ಮತ್ತಿಕೊಳ್ಳುತ್ತಾರೋ ಎಂಬ ಭಯದಿಂದ ಐಶೂ ಭೇಟಿಯನ್ನು ಅಷ್ಟೊಂದು ಗುಟ್ಟಾಗಿಡಲಾಗಿತ್ತು.

ಇತ್ತೀಚೆಗೆ ಐಶೂ ತನ್ನ ಅತ್ತೆಯ ಮೊಮ್ಮಗಳ ಸೀಮಂತಕ್ಕೆ ಮಂಗಳೂರಿಗೆ ತನ್ನ ಪುತ್ರಿ ಆರಾಧ್ಯಳೊಂದಿಗೆ ಮಂಗಳೂರಿಗೆ ಬಂದಿದ್ದರು. ಐಶೂ ಬಂದಿದ್ದ ವಿಷ್ಯ ವಿಮಾನ ನಿಲ್ದಾಣದ ಉನ್ನತಾಧಿಕಾರಿಗಳಿಗೆ ಗೊತ್ತಿದ್ದು ಬಿಟ್ಟರೆ ಉಳಿದದ್ದೆಲ್ಲಾ ಗಪ್ಚುಪ್. ವಿಮಾನ ನಿಲ್ದಾಣದಲ್ಲಿ ಭಾರೀ ಭದ್ರತೆ ಒದಗಿಸಲಾಗಿದ್ದರೂ ಭದ್ರತಾ ಅಧಿಕಾರಿಗಳಿಂತೂ ಯಾಕಾಗಿ ಈ ಪರಿಯ ಭದ್ರತೆ ಒದಗಿಸಲಾಗುತ್ತಿದೆ ಎಂಬ ವಿಷಯ ಗೊತ್ತಿರಲಿಲ್ಲ. ಪತ್ರಕರ್ತರಿಗೂ ಮೇಲಿಂದ ಮೇಲೆ ಸುದ್ದಿ ಬಂದಿದ್ದರೂ ಅದನ್ನು ಅಧಿಕೃತಗೊಳಿಸಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.
ನಗರದ ಓಶನ್ ಪಲರ್್ ಹೋಟೆಲ್ನಲ್ಲಿ ನಡೆದಿದ್ದ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಐಶ್ವಯರ್ಾ ರೈ ಬಚ್ಚನ್ ಅಲ್ಲಿ ತಮ್ಮ ಆಪ್ತ ಸಂಬಂಧಿಕರ ಜೊತೆ ನಕ್ಕು ನಲಿದರು. ಪುತ್ರ ಆರಾಧ್ಯಳನ್ನು ಎತ್ತಿ ಹಿಡಿದು ಕುಟುಂಬದ ಸದಸ್ಯರ ಜೊತೆ ಫೊಟೋಗೆ ಪೋಸ್ ನೀಡಿದ್ದ ಐಶ್ವಯರ್ಾಳಿಗೆ ಭದ್ರತಾ ಸಿಬ್ಬಂದಿ ರಕ್ಷಣೆ ಒದಗಿಸಿದ್ದರು. ಆದರೆ ಆಕೆ ಸಂಬಧಿಕರ ಮನೆಗೆ ಬಂದಿದ್ದ ಫೋಟೋಗಳು ಅದು ಹೇಗೋ ಲೀಕಾಗಿ ಬಿಟ್ಟಿದ್ದು ಕೊನೆಗೆ ಪತ್ರಕರ್ತರ ಕೈಗೆ ಸೇರುವಲ್ಲಿ ಸಫಲವಾಗಿದೆ.
ಐಶ್ವಯರ್ಾ ಜೊತೆ ತೆಗೆದಿದ್ದ ಭಾವಚಿತ್ರವನ್ನು ಆಕೆ ಮಂಗಳೂರಿನಿಂದ ತೆರಳಿದ ಬಳಿಕವಷ್ಟೇ ಮನೆಮಂದಿ ಇತರೇ ಸ್ನೇಹಿತರು ಮತ್ತು ಕುಟುಂಬಿಕರಿಗೆ ರವಾನೆ ಮಾಡಿದ್ದಾರೆ. ಐಶ್ವಯರ್ಾಳನ್ನು `ಕುಡ್ಲದ ಪೊಣ್ಣು’ ಎಂದು ಪ್ರೀತಿಯಿಂದ ಸತ್ಕರಿಸುವ ತುಳುವರು ಐಶ್ವಯರ್ಾ ರೈ ಈ ರೀತಿ `ಗಪ್ಚುಪ್’ ಆಗಿ ಬಂದು ಹೋಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

