ಸುದ್ದಿ9ಬಂಟ್ವಾಳ : ದೈವಗುಡ್ಡೆ ಫ್ರೆಂಡ್ಸ್ ಬಡ್ಡಕಟ್ಟೆ ಹಾಗೂ ವಾರ್ಡ್ ನಂ.5ರ ಪುರಸಭಾ ಸದಸ್ಯ ಪ್ರವೀಣ್ ಬಿ.ಯವರ ಸಹಯೋಗದಲ್ಲಿ ಸ್ಥಳೀಯ ಕನ್ನಡ ಮಾಧ್ಯಮದ 1ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಾ ವಿತರಣಾ ಕಾರ್ಯಕ್ರಮವನ್ನು ಬಡ್ಡಕಟ್ಟೆ ನಿತ್ಯಾನಂದ ಭಜನಾ ಮಂದಿರದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು . ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ , ಜಿಲ್ಲಾ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ತಹಶೀಲ್ದಾರ್ ಮಲ್ಲೇಸ್ವಾಮಿ , ತಾ.ಪಂ.ಸದಸ್ಯ ಮಾಧವ ಮಾವೆ , ಶಿಕ್ಷಕಿ ವಿಜಯಾ ಭಟ್ ಉಪಸ್ಥಿತರಿದ್ದರು .

