ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಮಲಗಿದ್ದಲ್ಲೇ ತಾಯಿ-ಮಗಳು ಮೃತಪಟ್ಟ ಘಟನೆ ಮಂಗಳವಾರ ಬೆಳಗಿನಜಾವ ನಡೆದಿದೆ.

ರುಕ್ಮಿಣಿ ವಿಠ್ಠಲ್ ಮಾಚಕ(37) ಮತ್ತು ಇವರ ಪುತ್ರಿ ಶ್ರೀದೇವಿ ವಿಠ್ಠಲ್ ಮಾಚಕ(13) ಮೃತರು.

ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಇವರು ವಾಸವಿದ್ದ ಮಣ್ಣಿನ ಮನೆಯ ಗೋಡೆ ಕುಸಿದಿದ್ದು, ಮಲಗಿದ್ದಲ್ಲೇ ಅಮ್ಮ-ಮಗಳು ಸಾವನ್ನಪ್ಪಿದ್ದಾರೆ.

By Suddi9

Leave a Reply

Your email address will not be published. Required fields are marked *