ಮೂಡುಬಿದರೆ: ಬೆಳುವಾಯಿಯ ಯಕ್ಷದೇವ ಮಿತ್ರ ಕಲಾಮಂಡಳಿ ಆಶ್ರಯದಲ್ಲಿ ಪದ್ಮಾವತಿ ಕಲಾಮಂದಿರದಲ್ಲಿ ನಡೆಯುತ್ತಿರುವ 17ನೇ ಯಕ್ಷ ಕಲೋತ್ಸವದಲ್ಲಿ ದಿ.ಲಾಡಿ ಕೃಷ್ಣ ಶೆಟ್ಟಿ ಸಂಸ್ಮರಣೆ ಕಾರ್ಯಕ್ರಮ ಶುಕ್ರವಾರ ಸಂಜೆ ನಡೆಯಿತು.
ಯಕ್ಷಗಾನ ಹಿರಿಯ ಹಿಮ್ಮೇಳ ಕಲಾವಿದ ಸುಂದರ ರೈ ಉಜಿರೆ ಅವರನ್ನು ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಸನ್ಮಾನಿಸಿದರು. ಕಾಶಿಪಟ್ನ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕ ಬೇಳ ಅನಂತ ಅಸ್ರಣ್ಣ ಆಶೀವರ್ಚನ ನೀಡಿದರು
ಮೂಡುಬಿದರೆ ತುಳುಕೂಟದ ಅಧ್ಯಕ್ಷ ಸುಭಾಶ್ಚಂದ್ರ ಪಡಿವಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಯಕ್ಷಗಾನವನ್ನು ಯುವಕರಿಗೆ ತಲುಪಿಸುವ ಪ್ರಯತ್ನ ನಡೆಯಬೇಕು. ಅಂತಹ ಪ್ರಯತ್ನವನ್ನು ಯಕ್ಷದೇವ ಮಿತ್ರ ಕಲಾಮಂಡಳಿಯಿಂದ ನಡೆಯುತ್ತಿರುವು ಶ್ಲಾಘನೀಯವೆಂದರು.

ಮೂಡುಬಿದರೆ ಚೌಟರ ಅರಮನೆಯ ಕುಲದೀಪ್.ಎಂ ಅಧ್ಯಕ್ಷತೆ ವಹಿಸಿದ್ದರು. ಬೆಳುವಾಯಿ ಭಾಸ್ಕರ ಆಚಾರ್ಯ ಸಂಸ್ಮರಣೆ ಮಾಡುತ್ತಾ, ಲಾಡಿ ಕೃಷ್ಣ ಶೆಟ್ಟಿ ಅವರ ಯಕ್ಷಗಾನ ಕಾಳಜಿ ಅನನ್ಯ. ಯಕ್ಷಗಾನದ ಹಿರಿ-ಕಿರಿ ಕಲಾವಿದರಿಗೆ ಸ್ಪೂತರ್ಿ ನೀಡುವಂತಹ ವ್ತಕ್ತಿತ್ವ ಅವರದ್ದು. ಕೃಷ್ಣ ಶೆಟ್ಟಿ ಜೀವಾನಾದರ್ಶಗಳು ಎಲ್ಲರಿಗೆ ಮಾದರಿ ಎಂದರು.
ನಯನಚಂದ್ರ ಶೆಟ್ಟಿ, ವಕೀಲರಾದ ಎನ್.ಕೆ.ಜಗನ್ನಿವಾಸ ರಾವ್, ಅರುಣ್ ಬಂಗೇರ, ಉದ್ಯಮಿ ವಸಂತ ರಾವ್, ಸಂಸ್ಥೆ ಗೌರವಾಧ್ಯಕ್ಷ ಶ್ರೀಪತಿ ಭಟ್
ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಬೈಪಾಡಿತ್ತಾಯ ನಂದಳಿಕೆ ಅಭಿನಂದನಾ ಭಾಷಣ ಮಾಡಿದರು. ಯಕ್ಷಮಿತ್ರಕಲಾ ಮಂಡಳಿಯ ಕಾಯರ್ಾಧ್ಯಕ್ಷ ಎಂ.ದೇವಾನಂದ ಭಟ್ ಸ್ವಾಗತಿಸಿದರು. ಅಮ್ಮಂಜೆ ಜನಾರ್ಧನ ಕಾರ್ಯಕ್ರಮ ನಿರೂಪಿಸಿದರು. ರವಿ ಪ್ರಸಾದ್ ಶೆಟ್ಟಿ ವಂದಿಸಿದರು.
