ಮೂಡುಬಿದರೆ: ಆಳ್ವಾಸ್ ನುಡಿಸಿರಿ-2014 ನಾಡು ನುಡಿಯ ಸಮ್ಮೇಳನ ಕ್ಷಣಗಣನೆ ಆರಂಭವಾಗಿದ್ದು, ಇದಕ್ಕೆ ಪೂರಕವಾಗಿ ವಿದ್ಯಾಗಿರಿಯ ಆಳ್ವಾಸ್ ಶೃಂಗಾರಗೊಳ್ಳುತ್ತಿದೆ. ಈ ತಯಾರಿಗಳ ನಡುವೆ ರಾಜ್ಯದ 36 ಕಲಾವಿದರು ತಮ್ಮ ಕುಂಚದ ಗರಿಯ ಸಿರಿಯಲ್ಲಿ ಮೂಡಿಸುತ್ತಿರುವ ಚಿತ್ರಗಳು ತಯಾರಿಗೆ ವಿಶೇಷ ಮೆರಗು ನೀಡುತ್ತಿದೆ.
Alvas Chitrasiri (6)

Alvas Chitrasiri (7)

Alvas Chitrasiri (8)

Alvas Chitrasiri (1)

Alvas Chitrasiri (2)

Alvas Chitrasiri (3)

Alvas Chitrasiri (4)

Alvas Chitrasiri (5)
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಚಿತ್ರಕಲಾ ಶಿಬಿರ ಆಳ್ವಾಸ್ ಚಿತ್ರಸಿರಿ-2014. ರಾಜ್ಯದ ವಿವಿದೆಡೆಗಳಿಂದ ಬಂದಂತಹ 36 ಕಲಾವಿದರು `ಸಮಕಾಲೀನತೆ’ ವಿಷಯದ ಕುರಿತ ಚಿತ್ರಗಳನ್ನು ಬಿಡಿಸುತ್ತಿದ್ದಾರೆ.36 ಕಲಾವಿದರಲ್ಲಿ ಬಹುತೇಕರು ತಲಾ 2 ಕಲಾಕೃತಿ ಪೂರ್ಣಗೊಳಿಸಿದ್ದಾರೆ. ಕೆಲವರು ಎರಡು ಕಲಾಕೃತಿಗಳನ್ನೂ ಬಿಡಿಸಿದ್ದಾರೆ. ನಾಲ್ಕು ದಿನ ನಡೆಯುವ ಈ ಶಿಬಿರದಲ್ಲಿ ಪ್ರತಿಯೊಬ್ಬ ಕಲಾವಿದರು ತಲಾ ಎರಡು ಚಿತ್ರ ಬಿಡಿಸುವಂತೆ ಆಳ್ವಾಸ್ ಸಂಸ್ಥೆ ಕೇಳಿಕೊಂಡಿದ್ದು, ವಿದ್ಯಾಗಿರಿಯ ಪ್ರಕೃತಿ ಸೊಬಗು, ಕಲೆಗೆ ಪೂರಕವಾದ ವಾತಾವರಣದಿಂದ ಪ್ರೇರಿತರಾಗಿರುವ ಕಲಾವಿದರು ಹೆಚ್ಚಿನ ಚಿತ್ರ ಬಿಡಿಸುವಲ್ಲಿಯೂ ಉತ್ಸುಕರಾಗಿದ್ದಾರೆ. ಶಿಬಿರದಲ್ಲಿ 3 ಕಲಾವಿದರು ಸಾಂಪ್ರಾದಾಯಿಕ ಶೈಲಿಯ ಚಿತ್ರಗಳನ್ನು ಬಿಡಿಸುತ್ತಿದ್ದು ಬಾಗಲಕೋಟೆಯ ರಮೇಶ್ ಆರ್. ರಾಜಪುರ್ ಅವರ ಕುಂಚದಿಂದ ಮೈಸೂರು ಶೈಲಿ ಅರಳುತ್ತಿದೆ. ವರ್ಣಚಿತ್ರದಲ್ಲಿ ಅರಳುತ್ತಿರುವ ಸಾಲುಮರದ ತಿಮ್ಮಕನ ಚಿತ್ರ ಆಕೆಯ ಬದುಕಿನ ಬಗ್ಗೆ ಸಾವಿರ ಪದಗಳನ್ನು ಹೇಳುವಂತಿದೆ.
ಆಳ್ವಾಸ್ ಸಂಸ್ಥೆಯ ಬಿವಿಎ( ಬ್ಯಾಚುರಲ್ ಆಫ್ ವಿಶ್ಯುವೆಲ್ ಆಟ್ಸ್) ವಿದ್ಯಾಥರ್ಿಗಳು ಹಾಗೂ ಆಳ್ವಾಸ್ ಪದವಿಪೂರ್ವ ಶಾಲೆಯ ವಿದ್ಯಾಥರ್ಿಗಳು ಸ್ವಯಂ ಸೇವಕರಾಗಿ ಭಾಗವಹಿಸಿದ್ದು, ಕಲಾವಿದರ ಜತೆ ಸಂವಾದ ನಡೆಸುತ್ತಿದ್ದಾರೆ. ಕಲಾವಿದರ ಕುಂಚದಿಂದ ಅರಳುತ್ತಿರುವ ಕಲೆಯನ್ನು ಆಸ್ವಾಧಿಸಲು ಆಳ್ವಾಸ್ ಸಂಸ್ಥೆಯ ವಿದ್ಯಾಥರ್ಿಗಳು, ಸಿಬ್ಬಂದಿಗಳು ಮಾತ್ರವಲ್ಲದೆ ಮೂಡುಬಿದರೆಯ ಕಲಾಸಕ್ತರು ಆಗಮಿಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *