ಮೂಡುಬಿದಿರೆ: ಆಳ್ವಾಸ್ ನುಡಿಸಿರಿ-2014ರ ಅಂಗವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ವಿದ್ಯಾಗಿರಿಯಲ್ಲಿ ನಡೆಯುವ ಆಳ್ವಾಸ್ ಚಿತ್ರಸಿರಿ 2014 ರಾಜ್ಯಮಟ್ಟದ ಚಿತ್ರಕಲಾ ಶಿಬಿರವು ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಗುರುವಾರ ಆರಂಭಗೊಂಡಿತು.
ಮೂಡುಬಿದಿರೆ ಜೈನಮಠದ ಭಟ್ಟಾರಕ ಸ್ವಸ್ತಿಶ್ರೀ ಚಾರುಕೀತರ್ಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಚಿತ್ರಸಿರಿಗೆ ಚಾಲನೆ ನೀಡಿ ಕಲಾವಿದರು ನಮ್ಮ ದೇಶದ ಆಸ್ತಿ. ಕಲಾವಿದರು ಕುಂಚಗಳಿಂದ ಅರಳಿಸುವ ಕಲೆಗಳಿಂದ ಯಾರ ಮನಸ್ಸಿಗೂ ನೋವು ನೀಡದೆ ಪಾರಂಪರಿಕ ಕಲೆಗಳಿಗೆ ಪೂರಕವಾದ ಕಲಾಕೃತಿಗಳನ್ನು ರಚಿಸಿ ಸೃಜನಶೀಲಯ ಮೂಲಕ ನಮ್ಮ ದೇಶಿಯ ಸಂಸ್ಕೃತಿಯನ್ನು ಸಾಕ್ಷತ್ಕರಿಸಬೇಕೆಂದು ಹೇಳಿದ ಅವರು ಕಲಾವಿದರೇ ನಮ್ಮ ದೇಶವನ್ನು ಕೇವಲ ಕೆಂಪು ಬಣ್ಣದಿಂದ `ವರ್ಣ’ನೆ ಮಾಡಬೇಡಿ. ಭಾರತದಲ್ಲಿರುವ ಸಮೃದ್ಧ ಹಸಿರು, ಶಾಂತಿಯ ಪ್ರತೀಕವಾದ ಬಿಳುಪನ್ನು ತಮ್ಮ `ವರ್ಣ’ಚಿತ್ರಗಳಲ್ಲಿ ಬಳಸಿ ಎಂದು ಸಲಹೆ ನೀಡಿದರು.

ಆದಿವಾಸಿಗಳ ಶಿಬಿರ ಯೋಜನೆ:
mbd_nov6_2 (1)

mbd_nov6_2 (2)

ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ , ಆಳ್ವಾಸ್ ನುಡಿಸಿರಿ ಕೇವಲ ಸಮ್ಮೇಳನವಾಗದೆ ಕನ್ನಡ ಭಾಷೆಯ ಚಿಂತನ-ಮಂಥನ ಮಾಡುವ ಕಾರ್ಯವಾಗಿದೆ. ಸಾಹಿತ್ಯದಿಂದ ಮಾತ್ರ ಭಾಷೆಯನ್ನು ಕಟ್ಟಿಲು ಸಾಧ್ಯವಿಲ್ಲ. ಸಾಹಿತ್ಯವನ್ನು ನಮ್ಮ ಭಾಷೆಗೆ ಪೂರಕವಾದ ಮಜಲುಗಳಲ್ಲಿ ವ್ಯಕ್ತಪಡಿಸುತ್ತಿದ್ದೇವೆ. ಕಳೆದ 7 ವರ್ಷಗಳಿಂದ ಚಿತ್ರಗಳ ಮೂಲಕ ಕನ್ನಡದ ಶ್ರೀಮಂತಿಕೆಯನ್ನು ಸಾಕಾರಗೊಳಿಸುವ `ಆಳ್ವಾಸ್ ಚಿತ್ರಸಿರಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ನಾಡಿನ ಗಮನ ಸೆಳೆಯುವ ಬೃಹತ್ ಚಿತ್ರಕಲಾ ಶಿಬಿರ ಮಾಡುವ ಉದ್ದೇಶವೂ ಇದೆ. ಅಲ್ಲದೆ 10 ದಿನಗಳ ಕಾಲ ಆದಿವಾಸಿಗಳ ಶಿಬಿರ ಮಾಡುವ ಬಗ್ಗೆಯೂ ಹಿರಿಯ ಕಲಾವಿದರ ಜತೆ ಸಮಾಲೋಚನೆ ಮಾಡುತ್ತಿದ್ದೇನೆ ಎಂದರು.

ಶಿಬಿರದಲ್ಲಿ ಪಾಲ್ಗೊಂಡಿರುವ 36 ಕಲಾವಿದರಿಗೆ ಕುಂಚ ಹಾಗೂ ಚಿತ್ರಕಲಾ ಸಲಕರಣೆಗಳನ್ನು ವಿತರಿಸಲಾಯಿತು.
ಗಣೇಶ್ ಸೋಮಯಾಜಿ ಸ್ವಾಗತಿಸಿದರು. ಗುರುಪ್ರಸಾದ್ ಶೆಟ್ಟಿ ನಿರೂಪಿಸಿ ವಂದಿಸಿದರು.

By Suddi9

Leave a Reply

Your email address will not be published. Required fields are marked *