ಬಂಟ್ವಾಳ :ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ದ.ಕ. ಮತ್ತು ಪುರಸಭೆಯ ಸಹಯೋಗದೊಂದಿಗೆ ಪುರಸಭೆಯಡೇ-ನಲ್ಮ್ಯೋಜನೆಯಡಿ ರಚಿಸಲಾದ ಸ್ವ-ಸಹಾಯ ಸಂಘಗಳಿಗೆ ತರಬೇತಿ ಕಾರ್ಯಕ್ರಮವು ಪುರಸಭಾ ಸಭಾಂಗಣದಲ್ಲಿ ಜರಗಿತು.ಪುರಸಭಾಧ್ಯಕ್ಷರಾದ ಮಹಮ್ಮದ್ ಶರೀಫ್ ಉದ್ಘಾಟಿಸಿ ಯಶಸ್ವಿಯಾಗಲೆಂದು ಶುಭ ಹಾರೈಸಿದರು.DSC_0925

ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ , ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ,ಸ್ವ-ಸಹಾಯ ಸಂಘಗಳ ಒಕ್ಕೂಟ ಅಧ್ಯೆಕ್ಷೆ ವಸಂತಿ ಗಂಗಾಧರ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿದ.ಕ.ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವ್ಯವಸ್ಥಾಪಕಿ ಐರಿನ್‌ ರೆ ಬೆಲ್ಲೋ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಪ್ರಧಾನ ಮಂತ್ರಿಕಿರು ಆಹಾರ ಸಂಸ್ಕರಣ ಉದ್ದಿಮೆಯ ಬಗ್ಗೆ ಮಾಹಿತಿ ನೀಡಿದರು. ಸಿ.ಆರ್.ಪಿ ಮಂಗಳ ಸ್ವಾಗತಿಸಿದರು.ಸಿ.ಆರ್.ಪಿ ಗೀತಾ ವಂದಿಸಿ ಪ್ರಭಾರ ಸಮುದಾಯ ವ್ಯವಹಾರ ಅಧಿಕಾರಿ ಉಮಾವತಿ ಕಾರ್ಯಕ್ರಮ ನಿರೂಪಿಸಿದರು.DSC_0919

By suddi9

Leave a Reply

Your email address will not be published. Required fields are marked *