ಮುಂಬಯಿ: ತುಳು ಸಂಘ ಬರೋಡ ಸಂಸ್ಥೆಯು ಇಂದಿಲ್ಲಿ ಶನಿವಾರ ಸಂಜೆ ಬರೋಡಾ ಕಲಾಲಿ ಇಲ್ಲಿನ ಡಿಪಿಎಸ್ ಶಾಲಾ ಸೌರಾಷ್ಟ್ರ ಜೈನ್ ಸಭಾಗೃಹದಲ್ಲಿ ಕೊಯಿಲ ತೆಲಿಕೆದ ಕಲಾವಿದೆರ್ ತಂಡದ `ಪಂಡ ಕೆನುಜೆರ್’ ತುಳು ಹಾಸ್ಯಮಯ ನಾಟಕವನ್ನು ಪ್ರದರ್ಶಿಸಿತು.

ತುಳು ಸಂಘ ಬರೋಡ ಇದರ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಗೌ| ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಉಪಸ್ಥಿತರಿದ್ದು ಕಲಾವಿದರನ್ನು ಅಭಿನಂದಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. ಮದನ್‌ಕುಮಾರ್ ಮೂಡಿಗೆರೆ, ವಿಶಾಲ್ ಸಾಂತ, ಕಾರ್ತಿಕ್ ಗೌಡ, ರವೀಂದ್ರ ಶೆಟ್ಟಿ, ದಯಾನಂದ ಸಾಲ್ಯಾನ್, ವಿನಯ್ ಶೆಟ್ಟಿ ಸಹಯೋಗದಿಂದ ಪ್ರದರ್ಶಿಸಲ್ಪಟ್ಟ ನಾಟಕದಲ್ಲಿ ನೂರಾರು ನಾಟಕಾಭಿಮಾನಿಗಳು ಉಪಸ್ಥಿತರಿದ್ದು ನಾಟಕ ವೀಕ್ಷಿಸಿ ಆನಂದಿಸಿದರು.

ಜೆ.ಪಿ ಕೊರಿಂಗೆಟ್ಟು ಸಂಚಾಲಕತ್ವ, ಪುರುಷೋತ್ತಮ ಕೊಯಿಲ ನಿರ್ದೇಶನ ಮತ್ತು ಸುರೇಶ್ ಕುಲಾಲ್ ಸಹಕಾರದಲ್ಲಿ ತೆಲಿಕೆದ ಕಲಾವಿದರು ಕೊಯಿಲ ತಂಡವು ತುಳುನಾಡ ತುಳುಶ್ರೀ ರಮಾ ಬಿ.ಸಿ ರೋಡ್ ಅಭಿಯನದಲ್ಲಿ `ಪಂಡ ಕೆನುಜೆರ್’ ತುಳು ಹಾಸ್ಯಮಯ ನಾಟಕ ಪ್ರದರ್ಶಿಸಿತು. ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಅವರು ಕಲಾವಿದ ತಂಡಕ್ಕೆ ಶುಭಕೋರಿದರು.

