ಬಂಟ್ವಾಳ: ತಾಲೂಕು ಅರಳ, ಕುಟ್ಟಿಕಳ ಸಾರ್ವಜನಿಕ ಶ್ರೀ ಶನಿ ಪೂಜಾ ಸೇವಾ ಸಮಿತಿ ಹಾಗೂ ಜನನಿ ಮಹಿಳಾ ಅಭಿವೃದ್ಧಿ ಸಂಘ ಇದರ ಜಂಟಿ ಆಶ್ರಯದಲ್ಲಿ ನ.8ರಂದು ಅರಳ ಶ್ರೀ ಗರುಡ ಮಹಾಕಾಳಿ ಕ್ಷೇತ್ರದಲ್ಲಿ 12ನೇ ವರ್ಷದ ಸಾರ್ವಜನಿಕ ಶ್ರೀ ಶನಿ ಪೂಜೋತ್ಸವ ಜರಗಲಿದೆ.
ಬೆಳಗ್ಗೆ ಗಣಹೋಮ, ಭಜನೆ, ಶನಿಪೂಜೆ ಆರಂಭ, ಮಹಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
