ಕಲ್ಲಡ್ಕ: ಪ್ರೌಢಶಾಲೆಗೆ ನೂತನವಾಗಿ ಸೇರ್ಪಡಯಾದ ಸಂಸ್ಕೃತ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಸಂಭಾಷಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಇವರು ದೀಪ ಪ್ರಜ್ವಲನ ಮಾಡುವ ಮುಖಾಂತರ ಉದ್ಘಾಟಿಸಿದರು.
ಅಧ್ಯಕ್ಷೀಯ ನೆಲೆಯಲ್ಲಿ ಸಂಸ್ಕೃತದ ಮಹತ್ವವನ್ನು ವಿವರಿಸುತ್ತಾ ಸಂಸ್ಕೃತದಿಂದ ಆಗುವ ಪ್ರಯೋಜನಗಳನ್ನು ವಿವರಿಸಿದರು. ವೇದಿಕೆಯಲ್ಲಿ ಹಿರಿಯ ಅಧ್ಯಾಪಕರಾದ ಶ್ರೀ ಗೋಪಾಲ್ ಶ್ರೀಮಾನ್, ಪದವಿ ಪೂರ್ವ ಕಾಲೇಜು ಸಂಸ್ಕೃತ ಉಪನ್ಯಾಸಕರಾದ ಶ್ರೀ ಮಹೇಂದ್ರ ಶ್ರೀಮಾನ್ ಹಾಗೂ ಪದವಿ ಮಹಾ ವಿದ್ಯಾಲಯದ ಸಂಸ್ಕೃತ ಉಪನ್ಯಾಸಕಿ ಶ್ರೀ ಮತಿ ಪ್ರಸನ್ನ ಮಾತಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೀರ್ತಿ ನಿರೂಪಿಸಿ ಸುಮೇಧ ಸ್ವಾಗತ ಮಾಡಿ ಅನನ್ಯ ಧನ್ಯವಾದ ಮಾಡಿದಳು
