ಮುಂಬಯಿ : ಜಿಎಸ್‌ಬಿ ಸಭಾ ಮುಂಬಯಿ ಪುರಸ್ಕಾರ ಪ್ರದಾನ ಸಮಾರಂಭವು ಮೇ.೨೯ರಂದು ಭಾನುವಾರ ಸಂಜೆ ದಾದರ್ ಪೂರ್ವದ ಐಇಎಸ್ ರಾಜ ಶಿವಾಜಿ ವಿದ್ಯಾಲಯದ (ಕಿಂಗ್ ಜಾರ್ಜ್ ಸ್ಕೂಲ್) ಬಿ.ಎನ್ ವೈದ್ಯ ಸಭಾಗೃಹದಲ್ಲಿ ಜರುಗಿಸಿತು.
ಅರುಣಾಚಲ ಪ್ರದೇಶದ ನಾಗಲ್ಯಾಂಡ್‌ನ ಮಾಜಿ ರಾಜ್ಯಪಾಲ ಡಾ| ಪಿ.ಬಿ ಆಚಾರ್ಯ (ಪದ್ಮನಾಭ ಬಾಲಕೃಷ್ಣ ಆಚಾರ್ಯ) ಮುಖ್ಯ ಅತಿಥಿಯಾಗಿದ್ದು ಪತ್ನಿ ಕವಿತಾ ಆಚಾರ್ಯ ಅವರನ್ನೊಳಗೊಂಡು ಡಾ| ಬಿ.ಎಂ ಆಚಾರ್ಯ ಸ್ಮಾರಕ ಜಿಎಸ್‌ಬಿ ಜೀವಮಾನ ಸಾಧನ ಪುರಸ್ಕಾರವನ್ನು ಕುಂದಾಪುರ ವಾಮನ್ ಕಾಮತ್ (ಕೆ.ವಿ ಕಾಮತ್) ಮತ್ತು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಅಶೋಕ್ ಕಿಣಿ ಹೆಚ್.ಇವರಿಗೆ, ಸಾಧನಾ ಮತ್ತು ಸುನೀಲ್ ಶೆಣೈ ಯುಎಸ್‌ಎ ಪ್ರಾಯೋಜಿತ ವತ್ಸಲಾ ಆರ್.ಶೆಣೈ ಸ್ಮಾರಕ ಜಿಎಸ್‌ಬಿ ಮಹಿಳಾ ಸಾಧಕ ಪುರಸ್ಕಾರವನ್ನು ಸಾಫ್ಟ್ವೇರ್ ಪ್ರವೀಣೆ ವಿಜಯಾ ವಿವೇಕ್ ಕಾಮತ್ ಮತ್ತು ಮಹಾರಾಜ್ ಸಮೂಹಹ ಮಂಗಳೂರು ಇದರ ಮುಖ್ಯ ಕಾರ್ಯನಿರ್ಹಾಹಕ ಅಧಿಕಾರಿ ಕೋಮಲ್ ಪ್ರಭು ಇವರಿಗೆ, ಕೆ.ಎಂ ಕಾಮತ್ ಸ್ಮಾರಕ ಜಿಎಸ್‌ಬಿ ಪ್ರತಿಭಾ ಗುರುತರ ಪುರಸ್ಕಾರವನ್ನು ತಬಲಾ ಪರಿಣತ ಸುಭಾಶ್ ಕಾಮತ್ ಮತ್ತು ಪ್ರಸಿದ್ಧ ಗಾಯಕ ವಿನಾಯಕ್ ಪ್ರಭು ಇವರಿಗೆ ಪ್ರದಾನಿಸಿ ಗೌರವಿಸಲಾಯಿತು.
ಅಧ್ಯಕ್ಷ ಲಕ್ಷ್ಮೀಕಾಂತ್ ತ್ರಿವಿಕ್ರಮ್ ಪ್ರಭು ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಗೌರವ ಕಾರ್ಯದರ್ಶಿ ಸತೀಶ್ ಮಣೆೆಲ್ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಕೋಶಾಧಿಕಾರಿ ಉದಯ ಮಲ್ಯ ಅತಿಥಿಗಳನ್ನು ಮತ್ತು ಸನ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.
