ಉಡುಪಿ: ಜಿಲ್ಲೆಯಲ್ಲಿ ಯಾವುದೇ ಪೊಲೀಸ್ ದಾಳಿ ನಡೆದಲ್ಲಿ ಪೊಲೀಸ್ ಇಲಾಖೆಯ ಮತ್ತು ಉಚ್ಚ ನ್ಯಾಯಾಲಯದ ಆದೇಶದ ಮಾರ್ಗ ಸೂಚಿಯಂತೆ ಆ ದಾಳಿಯ ಸಂಪೂರ್ಣ ಕಾರ್ಯಾಚರಣೆಯ ವೀಡಿಯೋ ಚಿತ್ರೀಕರಣಕಡ್ಡಾಯವಾಗಿ ನಡೆಸುವಂತೆ ಎಲ್ಲ ಪೊಲೀಸ? ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಎಸ?ಪಿ ಪಿ. ರಾಜೇಂದ್ರ ಪ್ರಸಾದ ಹೇಳಿದ್ದಾರೆ.
ಹಿರಿಯಡ್ಕ ಠಾಣಾ ವ್ಯಾಪ್ತಿಯ ಆತ್ರಾಡಿ ಗ್ರಾಮದ ಪರೀಕದಲ್ಲಿ ಅ. 31ರಂದು ಪಿಎಸೈ ನೇತೃತ್ವದಲ್ಲಿ ಜುಗಾರಿ ಅಡ್ಡೆಗೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಪಿಎಸೈ ಅವರು ಇಲಾಖಾ ನಿಯಮ ಪಾಲಿಸದಿರುವುದು ಕಂಡುದಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಮಾರ್ಗಸೂಚಿಯನ್ನು ಅನುಸರಿಸದೆ ನಿರ್ಲಕ್ಷ್ಯ ವಹಿಸಿದ ಕಾರಣ ಪಿಸೈ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಎಸ್ಪಿಯವರು ತಿಳಿಸಿದ್ದಾರೆ.

