ಪೊಳಲಿ:  ಆಸರೆ ಸೇವಾ ಫೌಂಡೇಶನ್ ನ ಸಮಾಜ ಉದ್ದೇಶದಿಂದ ಅಂತರಜಿಲ್ಲಾ ಪುರುಷರ ಬೆಳಕಿನ ಕಬಡ್ಡಿ ಪಂದ್ಯಾಟವು ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಕಬ್ಬಡಿ ಅಸೋಸಿಯೇಷನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಎಪ್ರಿಲ್ 23ರಂದು ರಾತ್ರಿ ಗಂಟೆ 7ರಿಂದ ಪೊಳಲಿ ಪುಂಚಮೆ ಮ್ಯಾಚ್ ಅಂಕಣದಲ್ಲಿ ಜರುಗಲಿದೆ.Polish_20220419_075110849

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಪ್ರತಿಭಾನ್ವಿತ ಆಟಗಾರರ ತಂಡ ಭಾಗವಹಿಸುವ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಬಹುಮಾನ 50000 ದ್ವಿತೀಯ ಬಹುಮಾನ 30000 ತೃತೀಯ ಬಹುಮಾನ 20000 ಚತುರ್ಥ ಬಹುಮಾನ 10 ಸಾವಿರ ಹಾಗೂ ವೈಯಕ್ತಿಕ ಬಹುಮಾನ ಶಾಶ್ವತ ಫಲಕ ವಿತರಿಸಲಾಗುವುದು,

ಕರಿಯಂಗಳ ಗ್ರಾಮದ ಬಡ ಜನರ ಆರ್ಥಿಕ ಹಿತದೃಷ್ಟಿಯಿಂದ ಪ್ರತಿ ತಿಂಗಳು ತಲಾ ಒಂದು ಕುಟುಂಬಕ್ಕೆ ಧನ ಸಹಾಯ, ಬಡ ಮಕ್ಕಳಿಗೆ ಶೈಕ್ಷಣಿಕ ಸಹಾಯ, ಅನಾರೋಗ್ಯ ಪೀಡಿತರಿಗೆ ತುರ್ತು ಧನಸಹಾಯ,ಶೌಚಾಲಯ ನಿರ್ಮಾಣ,ಸ್ವಚ್ಛತಾ ಕಾರ್ಯಕೋರೋನ ಕಾಲದಲ್ಲಿ 300ಕುಟುಂಬಕ್ಕೆ ಆಹಾರ ಕಿಟ್ ವಿತರಣೆ ಮೊದಲಾದ ಸಾಮಾಜಿಕ ಕಾರ್ಯಗಳಿಗೆ ಮುಂಚೂಣಿಯಲ್ಲಿ ನಿಲ್ಲುವ ಆಸರೆ ಸೇವಾ ಫೌಂಡೇಶನ್ ಗ್ರಾಮ ಮಟ್ಟದಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಹಣವನ್ನು ವಿನಿಯೋಗಿಸಿದೆ. ಈ ಸೇವಾಕಾರ್ಯವನ್ನು ಮುಂದುವರಿಸುವ ಉದ್ದೇಶದಿಂದ ಹಮ್ಮಿಕೊಂಡ ಕಬಡ್ಡಿ ಪಂದ್ಯಾಟವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.

By suddi9

Leave a Reply

Your email address will not be published. Required fields are marked *