ತೀರ್ಥಹಳ್ಳಿ: ಅತ್ಯಾಚಾರಕ್ಕೊಳಪಟ್ಟು ಕೊಲೆಗೀಡಾದ ಮುಗ್ಧ ಬಾಲಕಿ ನಂದಿತಾ ಪೂಜಾರಿ ಕೂಲ್ ಹುಡುಗಿ ಎಂದು ಆಕೆ ಓದುತ್ತಿದ್ದ ತೀರ್ಥಹಳ್ಳಿಯ ಶಾಲೆಯ ಉಪಪ್ರಾಂಶುಪಾಲರಾದ ಜೈದೇವ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ನಂದಿತಾ ಬ್ರೈಟ್ ಸ್ಟುಡೆಂಟೂ ಅಲ್ಲ, ಹಾಗೆಂದು ದಡ್ಡಿಯೂ ಅಲ್ಲ. ಅವರೇಜ್ ಸ್ಟುಡೆಂಟ್. ಪರೀಕ್ಷೆಯಲ್ಲಿ ಫೈಲ್ ಆಗುತ್ತಿರಲಿಲ್ಲ. ಸಾಧಾರಣವಾಗಿ ಉತ್ತಮ ಅಂಕಗಳನ್ನೇ ಪಡೆಯುತ್ತಿದ್ದಳು. ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಅವಳ ಪಾಡಿಗೆ ಅವಳಿರುತ್ತಿದ್ದಳು. ಗೆಳತಿಯರನ್ನೂ ಕಡಿಮೆ ಹೊಂದಿದ್ದಳು. ಕ್ಲಾಸಿನಲ್ಲಿ ಗಲಾಟೆ ಮಾಡುತ್ತಿರಲಿಲ್ಲ. ಪ್ರತೀದಿನ ಎರಡನೇ ಬೆಂಚ್ನಲ್ಲಿ ಕೂತಿರುತ್ತಿದ್ದಳು ಎಂದು ಅಭಿಪ್ರಾಯಿಸಿದ್ದಾರೆ.
ನಂತರ ಮಾತಾಡಿದ ಅವರು ನಂದಿತಾ ಕೊಲೆಯಾದ ನಂತರದಿಂ ಶಾಲೆಗೆ ರಜೆ ಕೊಟ್ಟಿದ್ದೇವೆ. ನಾಳೆ(ನ.6)ರಂದು ಮತ್ತೆ ಶಾಲೆಯನ್ನು ತೆರೆದು ಪೋಷಕರ ಮೀಟಿಂಗ್ ನಡೆಸಲಾಗುವುದು. ಯಾಕೆಂದರೆ ಮತ್ತೆ ಇಂಥದ್ದೇ ಘಟನೆ ನಡೆಯಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ತಿಳಿಸಿದ್ದಾರೆ.


