ಬಜ್ಪೆ: ನಂದಿತಾ ಕೊಲೆ ಹಾಗೂ ಅತ್ಯಾಚಾರ ಪ್ರಕರಣವನ್ನು ಮುಂದಿಟ್ಟುಕೊಂಡು `ಧರ್ಮ ರಕ್ಷಾ ಸಮಿತಿ-ಬಜ್ಪೆ’ ಎಂಬ ಸಂಘಟನೆ ಹಾಕಿದ ಬ್ಯಾನರ್ಗೆ ಮುಸ್ಲಿಂ ಸಮಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.
ಈ ಬ್ಯಾನರ್ ಬರಹದಿಂದ ಮುಸ್ಲಿಂ ಸಮುದಾಯಕ್ಕೆ ನೋವಾಗುತ್ತದೆ. ಅಲ್ಲದೆ ನಂದಿತಾ ಕೊಲೆ ಪ್ರಕರಣ ತನಿಖೆಯ ಹಾದಿಯಲ್ಲಿರುವುದರಿಂದ ಈ ರೀತಿಯ ಬ್ಯಾನರ್ ಸರಿಯಲ್ಲ. ಇದು ಕಿಡಿಗೇಡಿಗಳ ಕೃತ್ಯವಾಗಿದ್ದು ಬಜ್ಪೆ ಠಾಣೆಗೆ ಬ್ಯಾನರ್ ತೆರವುಗೊಳಿಸುವಂತೆ ಆಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.

