ಬಂಟ್ವಾಳ: ತಾಲ್ಲೂಕಿನ ಒಟ್ಟು ೧೭ ಪರೀಕ್ಷಾ ಕೇಂದ್ರಗಳಲ್ಲಿ ಸೋಮವಾರ ಆರಂಭಗೊAಡ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಗೆ ಮರು ಪರೀಕ್ಷೆ ಬರೆಯಬೇಕಿದ್ದ ೪ ಮಂದಿ ಪರೀಕ್ಷಾರ್ಥಿಗಳು ಸಹಿತ ಒಟ್ಟು ೩೩ ಮಂದಿ ಗೈರು ಹಾಜರಾಗಿದ್ದಾರೆ. ಒಟ್ಟು ೫,೫೯೮ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, ಈ ಪೈಕಿ ೫,೫೬೫ ಮಂದಿ ಮಾತ್ರ ಪರೀಕ್ಷೆಗೆ ಹಾಜರಾಗಿದ್ದಾರೆ. ಉಳಿದಂತೆ ಯಾವುದೇ ಅಹಿತಕರ ಘಟನೆ ಇಲ್ಲದೆ ಶಾಂತಿಯುತವಾಗಿ ಪರೀಕ್ಷೆ ನಡೆದಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

By suddi9

Leave a Reply

Your email address will not be published. Required fields are marked *