ಬಂಟ್ವಾಳ : ತಾಲ್ಲೂಕಿನ ರಾಯಿ ಸಮೀಪದ ಬೊಳ್ಳೋಡಿ ಎಂಬಲ್ಲಿ ರ‍್ಯಾಂಕ್ ವಿದ್ಯಾರ್ಥಿನಿ ಡಾ.ಪ್ರಣಮ್ಯ ಜೈನ್ ಇವರನ್ನು ಬಿ.ಸಿ.ರೋಡು ಪವರ್ ಸ್ಟಾರ್ ಜೆಸಿಐ ವತಿಯಿಂದ ಮಾ.09ರಂದು ಮಂಗಳವಾರ ಸಂಜೆ ಸನ್ಮಾನಿಸಿದರು.
ರಾಯಿ ಸಮೀಪದ ಬೊಳ್ಳೋಡಿ ಎಂಬಲ್ಲಿ ರ‍್ಯಾಂಕ್ ವಿದ್ಯಾರ್ಥಿನಿ ಡಾ.ಪ್ರಣಮ್ಯ ಜೈನ್ ಇವರನ್ನು ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಬಿ.ಸಿ.ರೋಡು ಪವರ್ ಸ್ಟಾರ್ ಜೆಸಿಐ ವತಿಯಿಂದ ಮಂಗಳವಾರ ಸಂಜೆ ಸನ್ಮಾನಿಸಿದರು. ಹೋಮಿಯೋಪತಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ ವಿಷಯದಲ್ಲಿ ೪ ನೇ ರ‍್ಯಾಂಕ್ ಗಳಿಸಿದ್ದರು. ಇದೇ ವೇಳೆ ಬಿ.ಸಿ.ರೋಡು ಗಾಂದೋಡಿ ಅಂಗನವಾಡಿ ಕೇಂದ್ರದಲ್ಲಿ ೩೦ ವರ್ಷ ದುಡಿದ ಕಾರ್ಯಕರ್ತೆ ಸರೋಜಾ ಪ್ರಕಾಶ್ ಇವರನ್ನು ಸನ್ಮಾನಿಸಲಾಯಿತು.
ಜೇಸಿ ಅಧ್ಯಕ್ಷ ಸುಬ್ರಹ್ಮಣ್ಯ ಕಾಡುಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೂಡ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪ್ರಮುಖರಾದ ಸುಧೀರ್ ಶೆಟ್ಟಿ ರಾಯಿ, ಹೇಮಚಂದ್ರ ಶೆಟ್ಟಿಗಾರ್, ಜಗದೀಶ್ ಕೊಯಿಲ, ರಾಘವೇಂದ್ರ ರಾಯಿ, ಸತೀಶ್ ಕೊಯಿಲ, ರೀಟಾ ಮರಿಯಾ ಮಿನೇಜಸ್, ಭವಾನಿ ಶೆಟ್ಟಿ , ಜೇಸಿ ಸುಭಾಶ್ ರೈ, ಸತೀಶ್ ಸಂಪಾಜೆ, ಮಹೇಶ್ ಶೆಟ್ಟಿ, ವಿದ್ಯಾ ಎಸ್. ರೈ, ಆಶಾ ದಿನೇಶ್ ಶೆಟ್ಟಿ, ಮರೀಟಾ ಕ್ರಿಸ್ಟಿನ್ ಡಿಸೋಜ ಮತ್ತಿತರರು ಇದ್ದರು.
