ಮುಂಬಯಿ: ಸದ್ಯ ನಡೆಯುತ್ತಿರುವ ರಷ್ಯಾ-ಉಕ್ರೇನ್‌ನ ಯುದ್ಧದ ಮಧ್ಯೆಯೂ ಏರ್ ಇಂಡಿಯಾ ಸಂಸ್ಥೆಗೆ ಪೈಲಟ್ ಕನ್ನಡತಿ ದಿಶಾ ಆದಿತ್ಯ ಮಣ್ಣೂರ ಭಾರತೀಯರನ್ನು ಕರೆತಂದಿರುವರು. ದಿಶಾ ಅವರು ಏರ್ ಇಂಡಿಯಾ ಲಿಮಿಟೆಡ್‌ನ ಪೈಲಟ್ ಡ್ರೀಮ್ ಲೈನರ್ ಬಿ-೭೮೭ ವಿಮಾನವನ್ನು ಹಾರಿಸಿ ದಾಖಲೆ ಗೈದಿರುವರು. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಸಿಲುಕಿರುವ ೨೪೨ ಭಾರತೀಯರನ್ನು ಮರಳಿ ಕರೆ ತರಲು ಅವರು ಇತ್ತೀಚೆಗೆ ಇನ್ನೂ ೪ ಪೈಲಟ್ ಗಳೊಂದಿಗೆ ೧ನೇ ಪಾರುಗಾಣಿಕಾ ವಿಮಾನ ಎಐ-೧೯೪೭ನ್ನು ನವದೆಹಲಿಯಿಂದ ಉಕ್ರೇನ್ (ಕೀವ್) ಹಾರಿಸಿದರು.
ದಿಶಾ ೨೦೧೧ನೇ ಇಸವಿಯಲ್ಲಿ ವೆಲಿಂಗಟನ್ ( ನ್ಯೂಜಿಲೆಂಡ್) ವಿಮಾನ ತರಬೇತಿ ಪಡೆದು ೨೦೧೭ರಿಂದ ಏರ್ ಇಂಡಿಯಾ ಸಂಸ್ಥೆಗೆ ಪೈಲಟ್ ಆಗಿ ಸೇರ್ಪಡೆಗೊಂಡಿರುವರು. ಅಂದಿನಿಂದ ವಿಶ್ವದ ಅನೇಕ ರಾಷ್ಟ್ರಗಳಿಗೆ ವಿಮಾನ ಹಾರಿಸಿರುವರು. ದಿಶಾ ಅವರ ಪತಿ ಆದಿತ್ಯ ಮಣ್ಣೂರ ಅವರೂ ಸಹ ಏರ್ ಇಂಡಿಯಾದಲ್ಲಿ ಪೈಲಟ್ ಆಗಿರುವರು.
ಉತ್ತರ ಕರ್ನಾಟಕದ ಬೆಳಗಾವಿ ಮೂಲದ (ಗೋರೆಗಾಂ ಕರ್ನಾಟಕ ಸಂಘದ ಸಕ್ರೀಯ ಸದಸ್ಯೆ) ಪದ್ಮಜಾ ಪ್ರಲ್ಹಾದ ಮಣ್ಣೂರ ಅವರ ಸುಪುತ್ರ ಮತ್ತು ಸೊಸೆ ಆಗಿರುವ ಆದಿತ್ಯ ಮತ್ತು ದಿಶಾ ಇವರಿಬ್ಬರ ಉತ್ತರೋತ್ತರ ಏಳಿಗೆ ಮಣ್ಣೂರ ಹಾಗೂ ಗಡ ಪರಿವಾರವು ಅಭಿನಂದಿಸಿದ್ದಾರೆ

