ಬಂಟ್ವಾಳ: ಸಾರ್ವಜನಿಕ ಆಸ್ಪತ್ರೆಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಭಾನುವಾರ ಭೇಟಿ ನೀಡಿ ಜೇನು ನೊಣ ದಾಳಿಯಿಂದ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಇಲ್ಲಿನ ಇರ್ವತ್ತೂರು ಗ್ರಾಮದ ಕಲಾಬಾಗಿಲು ಎಂಬಲ್ಲಿ ಮರದಲ್ಲಿದ್ದ ಜೇನು ಗೂಡಿಗೆ ಗಿಡುಗ ಕಿಕ್ಕಿದ ಪರಿಣಾಮ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ೯ ಮಂದಿಗೆ ಜೇನು ನೊಣ ದಾಳಿ ಮಾಡಿದ ಘಟನೆ ಭಾನುವಾರ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ನಿವಾಸಿ ಅರುಣ್ ಶೆಟ್ಟಿ, ಐತಪ್ಪ ಶೆಟ್ಟಿ, ಗಂಗಯ ಗೌಡ, ಶೀನ ಶೆಟ್ಟಿ, ಲಲಿತಾ ಮತ್ತಿತರರು ಎಂದು ಗುರುತಿಸಲಾಗಿದ್ದು, ಇವರನ್ನು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
