ಬಂಟ್ವಾಳ :ತಾಲ್ಲೂಕಿನ ಕಾರಣಿಕ ಪ್ರಸಿದ್ಧ ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಗಣಪತಿ ಗುಡಿ ನಿರ್ಮಿಸಿ ಕೊಟ್ಟ ದಾನಿ ಕೆ.ಸಂಜೀವ ಪೂಜಾರಿ ಮೆಲ್ಕಾರ್ ಇವರನ್ನು ಸನ್ಮಾನಿಸಲಾಯಿತು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರರು ಇದ್ದರು.
