ಬಂಟ್ವಾಳ: ಶಿವಮೊಗ್ಗ ಜಿಲ್ಲೆಯ ಹಿಂದೂ ಸಂಘಟನೆಯ ಪ್ರಮುಖ ಯುವ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ 1ಲಕ್ಷ ರೂ. ನೆರವು ಹಸ್ತಾಂತರಿಸಿದ್ದಾರೆ.WhatsApp Image 2022-02-22 at 4.37.14 PM

ಸಾವಿಗೆ ನ್ಯಾಯ ಸಿಗಬೇಕು, ಆತನ ಕೊಲೆ ಮಾಡಿದ ಆರೋಪಿಗಳ ಜೊತೆ, ಅದರ ಹಿಂದಿರುವ ಶಕ್ತಿಗಳ ಪತ್ತೆ ಮಾಡಿ ಕಠಿಣ ಶಿಕ್ಷೆಗೊಳಪಡಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಒತ್ತಾಯಿಸಿದ್ದಾರೆ.

ಕುಟುಂಬದ ಆಧಾರ ಸ್ತಂಭವಾಗಿ, ಕುಟುಂಬದ ನಿರ್ವಹಣೆ ಜವಬ್ದಾರಿಯನ್ನು ಹೊಂದಿದ್ದ ಹರ್ಷನ ಕುಟುಂಬಕ್ಕೆ ನ್ಯಾಯ ಒದಗಿಸುವ ಜೊತೆಗೆ ಕುಟುಂಬದ ನಿರ್ವಹಣೆ ಜವಾಬ್ದಾರಿಗೆ ಕಷ್ಟ ವಾಗಬಾರದು ಎಂಬುದು ಹಿಂದೂ ಸಮಾಜದ ಧೈಯ ವಾಗಿದೆ.

ಈ ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ ಉಳಿಪ್ಪಾಡಿಗುತ್ತು ಅವರು ವೈಯಕ್ತಿಕ ನೆಲೆಯಲ್ಲಿ ಅವರ ಬ್ಯಾಂಕ್ ಖಾತೆಯಿಂದ ರೂ ಒಂದು ಲಕ್ಷ ಹಣವನ್ನು ಹರ್ಷ ಅವರ ಕುಟುಂಬದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾಗಿ ಶಾಸಕರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *