ಕೈಕಂಬ : ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನ ಪಲ್ಲಿಪಾಡಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವರುಗಳ ನವೀಕರಣ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಪ್ರಯುಕ್ತ ಫೆ.07ರಂದು ಸೋಮವಾರ ಶ್ರೀ ಚಕ್ರಪೂಜೆ ಪೊಳಲಿ ವೆಂಕಟೇಶ್ ತಂತ್ರಿಯವರ ನೇತೃತ್ವದಲ್ಲಿ ನೆರವೇರಿತು.

ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಭಾಸ್ಕರ ಭಟ್, ಭಾಸ್ಕರ ರಾವ್ ಪಲ್ಲಿಪಾಡಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಜೀರ್ಣೋದ್ಧಾರ, ಕಾರ್ಯಾಧ್ಯಕ್ಷ ವಿಷ್ಣು ಮೂರ್ತಿ ಭಟ್, ಕರಿಯಂಗಳ ಗ್ರಾಮಪಂಚಾಯತ್ ಅಧ್ಯಕ್ಷ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಪೊಳಲಿ ವೆಂಕಟೇಶ್ ನಾವಡ, ರಮೇಶ್ ರಾವ್, ನರಸಿಂಹ ಮಯ್ಯ ಬಿಸಿ ರೋಡ್, ಸುಬ್ರಾಯ ಕಾರಂತ ಪೊಳಲಿ ಜೀರ್ಣೋದ್ಧಾರ ಸಮಿತಿ, ಸದಸ್ಯರು ಜೀರ್ಣೋದ್ಧಾರ ಸಮಿತಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.

