ಬಂಟ್ವಾಳ : ಬ್ಲಾಕ್ ಕಾಂಗ್ರೆಸ್‌ನ ಕಾವಳಮೂಡೂರು ಗ್ರಾಮ ಪಂಚಾಯತ್‌ಗೆ ಒಳಪಟ್ಟ ಬೂತ್ ಅಧ್ಯಕ್ಷರ ಮನೆ ಮನೆ ಭೇಟಿ “ನಮ್ಮ ನಡೆ ಬೂತ್ ಕಡೆ ಕಾರ್ಯಕ್ರಮವು ಮಾಜಿ ಸಚಿವ ಬಿ ರಮಾನಾಥ ರೈಯವರ ಮಾರ್ಗ ದಹನದಲ್ಲಿ ಜ.24ರಂದು ಸೋಮವಾರ ಬೂತ್ ಅಧ್ಯಕ್ಷರ ನಿವಾಸದಲ್ಲಿ ತೆಂಗಿನ ಸಸಿಯನ್ನು ನೆಡುವ ಮುಖಾಂತರ “ಕಾಂಗ್ರೆಸ್ ಪಕ್ಷ ಕಲ್ಪವೃಕ್ಷ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.WhatsApp Image 2022-01-29 at 1.42.38 PM (1)

ಕ್ಷೇತ್ರದ ಜನತೆಯ ಆಶೀರ್ವಾದದಿಂದ ನನಗೆ ಆರು ಬಾರಿ ಶಾಸಕನಾಗಲು ಅವಕಾಶವಾಯಿತು. ಪಕ್ಷ ಅವಕಾಶ ಮಾಡಿಕೊಟ್ಟಲ್ಲಿ ಮತದಾರರ ಆಶೀರ್ವಾದದಿಂದ ಮತ್ತೊಮ್ಮೆ ಜನತೆಯ ಸೇವೆ ಮಾಡಲು ಸದಾ ಸಿದ್ಧ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಬ್ಲಾಕ್ ಕಾಂಗಸ್ ಅಧ್ಯಕ್ಷರಾದ ಬೇಬಿ ಕುಂದರೆ, ಮಾತನಾಡಿ, ಬೂತ್ ಮಟದಿ೦ದ ಶಕವನ್ನು ಬಲಪಡಿಸಲು ಕಾರ್ಯಕರ್ತರು ಹೆಚ್ಚು ಆಸಕ್ತಿ ವಹಿಸುವಂತೆ ಕರೆ ನೀಡಿದರು. ಪಕ್ಷದ ತರಿಕ ವಿಚಾರವನ್ನು ಪಕದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳುವಲ್ಲಿ ನಾವೆಲ್ಲರೂ ಕುಬದ್ಧರಾಗೋಣ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪದ್ಯಶೇಖರ ಜೈನ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ್‌ ಶೆಣೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಲವೀನಾ ವಿಲ್ಮಾ ಮೋರಸ್ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಸದಾನಂದ ಶೆಟ್ಟಿ, ವಲಯ ಕಾಂಗ್ರೆಸ್‌ ಅಧ್ಯಕ್ಷರಾದ ಪಿ.ಆರ್.ಅಂಚನ್ ಜೊತೆ ಅಧ್ಯಕ್ಷರಾದ ಧೀರಾಜ್, ನಿಡಾಲ್, ವಸಂತ ಶೆಟ್ಟಿ ಇಜಿಯೊಟ್ಟು, ಪಂಚಾಯತ್ ಸದಸ್ಯರಾದ  ಖಲೀಲ್, ಮುಖಂಡರಾದ ಸತೀಶ್ ಪೂಜಾರಿ, ಚಂದ್ರಶೇಖರ್ ಪೂಜಾರಿ ನಿಡ್ವಾಲ್, ಅಚ್ಚ್ಯುತ ಪೂಜಾರಿ, ಕೊಂಬೆಲ್ ಪುರುಷೋತ್ತಮ ಬಂಗೇರ, ಅರುಣ್ ಕುಮಾರ್ ಭಟ್ ಕಲ್ಲಂಜ, ಮಮತ ನೀಲಯ್ಯ, ಉಮನ ಕಾಂದೋಡಿ, ಶಬನ ಕಾವಳಕಟ್ಟೆ, ರೋಹಿತಾಕ್ಷಿ ಜೋಡುಕರೂರ್ ಗುರಿಮಜಲ್, ಜನಾರ್ಧನ ಆಚಾರ್ಯ, ನಳಿನಿ ಕಾಂದ್ರೋಡಿ, ಜೀವಂದ‌ರ್ ಚೈನ್‌, ಬಾಲಕೃಷ್ಣ ಶೆಟ್ಟಿ ಇಜ್ಜಾಲ, ಶಿವರಾಮ ಶೆಟ್ಟಿ ಪರ್ಮರೋಡಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *