ಬಂಟ್ವಾಳ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ನಮ್ಮವರೇ ಆದ ಉದ್ಯಮಿ, ದಕ್ಷಿಣ ಕನ್ನಡ ಸವಿತಾ ಸಮಾಜ ಸಹಕಾರಿಯ ಅಧ್ಯಕ್ಷರಾದ ವಿಶ್ವನಾಥ್ ಸಾಲಿಯಾನ್ ಬಂಟ್ವಾಳ ಆಯ್ಕೆಯಾಗಿದ್ದಾರೆ.
ಓರ್ವ ಕ್ಷೌರಿಕನಾಗಿ, ನಂತರದ ದಿನಗಳಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ನಮ್ಮ ವಿಶ್ವನಾಥ್ ಬಂಟ್ವಾಳ್ ಮಾಡದ ವ್ಯವಹಾರ ಇಲ್ಲ ಎನ್ನುವಷ್ಟರ ಮಟ್ಟಿಗೆ ಸಲೂನ್, ಸ್ಟುಡಿಯೋ,, ಪತ್ರಿಕಾರಂಗ,ಫಾರಂ, ಕೃಷಿ, ಬಿಲ್ಡರ್, ರಿಯಲ್ ಎಸ್ಟೇಟ್, ಹೋಟೆಲ್, ವಿಶೇಷವಾಗಿ ಚಿನ್ನದ ಅಂಗಡಿ ಶೋ ರೂಮ್ (ಉಷಾ ಜುವೆಲ್ಲರ್ಸ್)ಕೂಡಾ ಪ್ರಾರಂಭಿಸಿ ಒಬ್ಬ ಕ್ಷೌರಿಕ ನಿಂದ ಚಿನ್ನದಂಗಡಿ ಮಾಡಲು ಸಾಧ್ಯ ಎಂಬುದನ್ನು ತೋರಿಸಿ ಸಾಧಕರಾಗಿದ್ದಾರೆ.
ರೋಟರಿ ಇನ್ನಿತರ ಸೇವಾ ಸಂಸ್ಥೆಗಳಲ್ಲಿ ಕೈಜೋಡಿಸಿ ಧಾರ್ಮಿಕ ಕ್ಷೇತ್ರದಲ್ಲೂ ಕೂಡ ಮಂಚೂಣಿಯಲ್ಲಿ ಸೇವಾ ಕೆಲಸ ಕಾರ್ಯಗಳನ್ನು ಮಾಡುತ್ತಾ, ಇದೀಗ ಸಾಹಿತ್ಯ ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸಿ ಇದೀಗ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ
