ಬಂಟ್ವಾಳ: ಪುರಸಭೆಯಲ್ಲಿ ಬುಧವಾರ ಏರ್ಪಡಿಸಿದ್ದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಉದ್ಘಾಟಿಸಿದರು. ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಮತ್ತಿತರರು ಇದ್ದರು.
ಇಲ್ಲಿನ ಪುರಸಭೆಯಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ (ಡೇ-ನಲ್ಮ್) ಯೋಜನೆಯಡಿ ಬೀದಿ ವ್ಯಾಪಾರಿಗಳ ಬೆಂಬಲ ಉಪ ಘಟಕದಡಿ ಬೀದಿಬದಿ ವ್ಯಾಪಾರಿಗಳ ಅಧಿನಿಯಮಗಳು ಹಾಗೂ ವಿವಿಧ ಯೋಜನೆಗಳ ಬಗ್ಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕರ‍್ಯಾಗಾರ ಬುಧವಾರ ನಡೆಯಿತು.
ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿ ಜಿಲ್ಲಾ ಕೌಶಲ್ಯಾಭಿವೃದಿ ್ಧಇಲಾಖೆ ಮಿಷನ್ ಮ್ಯಾನೇಜರ್ ಐರಿನ್ ರೆಬೆಲ್ಲೊ ಮತ್ತು ವಕೀಲ ವೀರೇಂದ್ರ ಎಂ.ಸಿದ್ಧಕಟ್ಟೆ ಮಾಹಿತಿ ನೀಡಿದರು. ಸಮುದಾಯ ಸಂಘಟನಾಧಿಕಾರಿ ಉಮಾವತಿ ಸ್ವಾಗತಿಸಿ, ಜಯಲಕ್ಷ್ಮಿ ವಂದಿಸಿದರು.
