ಬಂಟ್ವಾಳ: ಮದಂಗೋಡಿ ಮುಗೇರುಗುಡ್ಡೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ ದಲ್ಲಿ ವಾರ್ಷಿಕ ಜಾತ್ರೆ ಪ್ರಯುಕ್ತ ಅಲೇರ ಪಂಜುರ್ಲಿ ದೈವದ ಹಗಲು ನೇಮೋತ್ಸವ ಜ.18ರಂದು ಮಂಗಳವಾರ ಮಧ್ಯಾಹ್ನ ನೆರವೇರಿತು19btl-Madamngody

ಕಳೆದ ವರ್ಷವಷ್ಟೇ ಪುನರ್ ನಿರ್ಮಾಣಗೊಂಡ ಇಲ್ಲಿನ ಸಂಗಬೆಟ್ಟು ಗ್ರಾಮದ ಕಾರಣಿಕ ಪ್ರಸಿದ್ಧ ಮದಂಗೋಡಿ ಮುಗೇರುಗುಡ್ಡೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ ದಲ್ಲಿ ವಾರ್ಷಿಕ ಜಾತ್ರೆ ಪ್ರಯುಕ್ತ ಅಲೇರ ಪಂಜುರ್ಲಿ ದೈವದ ಹಗಲು ನೇಮೋತ್ಸವ ಮಂಗಳವಾರ ಮಧ್ಯಾಹ್ನ ನೆರವೇರಿತು.

ಆಡಳಿತ ಸಮಿತಿ ಗೌರವಾಧ್ಯಕ್ಷ ರತ್ನಕುಮಾರ್ ಚೌಟ ಮಾಂಗಾಜೆ, ಎಂ.ಭುಜಬಲಿ ಕಂಬಳಿ, ಅಧ್ಯಕ್ಷ ರತ್ನಾಕರ ಪೂಜಾರಿ ಮದಂಗೋಡಿ, ಕಾರ್ಯಾಧ್ಯಕ್ಷ ಸತೀಶ ಪೂಜಾರಿ ಅಳಕೆ, ಪ್ರಭಾಕರ ಪ್ರಭು ನಡಿಬೈಲು, ಗುರಿಕಾರ ಶ್ರೀಧರ ಮುಗೇರ ಮುಗೇರುಗುಡ್ಡೆ, ಪ್ರಮುಖರಾದ ಮಹಾಬಲ ಪೂಜಾರಿ, ಅರುಣ್ ಪೂಜಾರಿ ಅಳಕೆ ಮತ್ತಿತರರು ಇದ್ದರು. ಇದೇ ವೇಳೆ ಸಾರ್ವಜನಿಕ ಅನ್ನಸಂತರ್ಪಣೆ ಮತ್ತು ದೈವಕ್ಕೆ ಕುರುತಂಬಿಲ ಅಗೇಲು ಸೇವೆ ನಡೆಯಿತು.

By suddi9

Leave a Reply

Your email address will not be published. Required fields are marked *