ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಗಂಟಾಲ್ಕಕಟ್ಟೆಯಲ್ಲಿ ಓಮ್ನಿ ಕಾರು- ಬೈಕ್ ಡಿಕ್ಕಿಯಾಗಿ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಕ್ಷಗಾನ ಕಲಾವಿದ ವೇಣೂರು ಸಮೀಪದ ವಾಮನ ಕುಮಾರ್ (47) ಮೃತಪಟ್ಟ ದುರ್ದೈವಿ. ಬಡಗು ತಿಟ್ಟಿನ ಯಕ್ಷಗಾನ ಮೇಳದಲ್ಲಿ ಹಾಗೂ ಚಿಕ್ಕಮೇಳದಲ್ಲಿ ಯಕ್ಷ ಕಲಾವಿದನಾಗಿ ದುಡಿಯುತ್ತಿರುವ ಕಲಾವಿದ.



